ಕಾರ್ಕಳಹೆಬ್ರಿ

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಕ್ರೀಡೆ ದೈಹಿಕ ಮತ್ತು ಮಾನಸಿಕ ಕ್ಷಮತೆ ಹೆಚ್ಚಿಸುತ್ತದೆ. ಕ್ರೀಡೆ ಮಾನಸಿಕತೆಯ ಮಟ್ಟವನ್ನ ಬೆಳೆಸಿ ಪ್ರೇರಣೆಯನ್ನು ನೀಡುತ್ತದೆ . ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡು ಸ್ಪರ್ಧೆಯಲ್ಲಿ ಆರೋಗ್ಯವಾಗಿ ಸ್ಪರ್ಧಿಸಿ ಬಹುಮಾನವನ್ನು ಗೆಲ್ಲುವಂತೆ ಶುಭನುಡಿಯನ್ನು , ಕ್ರೀಡಾಕೂಟ ಸಾಂಗವಾಗಿ ಜರುಗಲಿ ಎಂದು ಅಮೃತ ಭಾರತಿ ಆಡಳಿತ ಮಂಡಳಿ ಅಧ್ಯಕ್ಷರಾದ ಶೈಲೇಶ ಕಿಣಿ ಹೇಳಿದರು.


ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಮೈದಾನದಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.


ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆಯನ್ನು ಭಾರತ ಮಾತೆ, ಸರಸ್ವತಿ, ಓಂಕಾರ ಭಾವಚಿತ್ರಕ್ಕೆ ಅಮೃತ ಭಾರತಿ ಟ್ರಸ್ಟ್ ಸದಸ್ಯರಾದ ಬಾಲಕೃಷ್ಣ ಮಲ್ಯ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ನೆರವೇರಿಸಿದರು.


ವಾರ್ಷಿಕ ಕ್ರೀಡಾಕೂಟದ ಪಥಸಂಚಲನೆಯ ಗೌರವ ವಂದನೆಯನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಪುಷ್ಪರಾಜ್ ಜೈನ್ ಸ್ವೀಕರಿಸಿದರು ಮತ್ತು ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕ್ರೀಡೆಗೆ ಚಾಲನೆಯನ್ನು ನೀಡಿದರು.


ವೇದಿಕೆಯಲ್ಲಿ ಅಮೃತ ಭಾರತಿ ವಿದ್ಯಾ ಕೇಂದ್ರದ ಪ್ರಾಂಶುಪಾಲರು ಅರುಣ್ .ಸಿ.ವೈ., ಅಮೃತ ಭಾರತಿ ಪ್ರಾಥಮಿಕ ವಿಭಾಗದ ಮುಖ್ಯಸ್ಥರು ಶ್ರೀಮತಿ ಅನಿತಾ, ಶ್ರೀಮತಿ ಶಕುಂತಲಾ, ಹೈಸ್ಕೂಲು ವಿಭಾಗದ ಉಪಮುಖ್ಯ ಉಪಾಧ್ಯಾಯರು ಮಹೇಶ್ ಹೈಕಾಡಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ ಕುಮಾರ ಶೆಟ್ಟಿ ಉಪಸ್ಥಿತರಿದ್ದರು .


ಶ್ರೀಮತಿ ವಿಮಲಾ ಮಾತಾಜಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Related posts

ಅಪ್ರೆಂಟಿಸ್ ತರಬೇತಿ: ಪತ್ರಿಕೋದ್ಯಮ ಪದವೀಧರರಿಂದ ಅರ್ಜಿ ಆಹ್ವಾನ

Madhyama Bimba

ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ನೂತನ ಒಪಿಡಿ, ಲೇಬರ್ ಥಿಯೇಟರ್ (ಹೆರಿಗೆ ಕೊಠಡಿ) ಕಾಂಪ್ಲೆಕ್ಸ್‌ಗೆ ಶಂಕುಸ್ಥಾಪನೆ

Madhyama Bimba

ಅಂತರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ ಶಿಪ್- ನಕ್ರೆ ಪವನ್‌ರಿಗೆ ದ್ವಿತೀಯ ಸ್ಥಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More