ಕಾರ್ಕಳ ತಾಲೂಕು ವ್ಯಾಪ್ತಿಯ 6 ಗ್ರಾಮ ಪಂಚಾಯತ್ತುಗಳ ಚುನಾವಣೆ ಪ್ರಕ್ರಿಯೆ ಮುಗಿದಿದ್ದು 67.061 ಮತದಾನ ನಡೆದಿದೆ.
ಈದು ಗ್ರಾಮ ಪಂಚಾಯತ್ ನಲ್ಲಿ 1 ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಪುರುಷರು 256 ಮಂದಿ, ಮಹಿಳೆಯರು 261 ಮಂದಿ ಮತ ಚಲಾಯಿಸಿದ್ದಾರೆ. ಶೇ 50 ಮತದಾನ ಆಗಿದೆ.
ನಲ್ಲೂರು ಗ್ರಾಮ ಪಂಚಾಯತ್ ನಲ್ಲಿ 272 ಪುರುಷರು, 317 ಮಹಿಳೆಯರು ಮತದಾನ ಮಾಡಿದ್ದಾರೆ. ಶೇ.65.88 ಮತದಾನ ಆಗಿದೆ.
ನಿಟ್ಟೆ ಗ್ರಾಮ ಪಂಚಾಯತ್ ನಲ್ಲಿ 276 ಪುರುಷರು, 305 ಮಹಿಳೆಯರು ಮತದಾನ ಮಾಡಿದ್ದಾರೆ. 68.67 ಮತ ದಾನ ಆಗಿದೆ.
ನೀರೆ ಗ್ರಾಮ ಪಂಚಾಯತ್ ನಲ್ಲಿ 242 ಪುರುಷರು, 278 ಮಹಿಳೆಯರು ಮತದಾನ ಮಾಡಿದ್ದಾರೆ. ಶೇ.63.64 ಮತದಾನ ಆಗಿದೆ.
ಕೆರ್ವಾಶೆ ಗ್ರಾಮ ಪಂಚಾಯತ್ ನಲ್ಲಿ 291 ಪುರುಷರು, 303 ಮಹಿಳೆಯರು ಮತ ದಾನ ಮಾಡಿದ್ದಾರೆ. ಶೇ 78.15 ಮತದಾನ ಆಗಿದೆ.
ಕಡ್ತಲ ಕುಕ್ಕುಜೆ ಚುನಾವಣೆಯಲ್ಲಿ 320 ಪುರುಷ, 340 ಮಹಿಳೆಯರು ಮತ ಚಲಾಯಿಸಿದ್ದಾರೆ. ಒಟ್ಟು ಶೇ 81ಮತದಾನ ಆಗಿದೆ.
ಈದುವಿನಲ್ಲಿ ಅತೀ ಕಡಿಮೆ ಮತದಾನ, ಕಡ್ತಲದಲ್ಲಿ ಅತೀ ಹೆಚ್ಚು ಮತದಾನ ಆಗಿದೆ