ಕಾರ್ಕಳ: ಕಾರ್ಕಳ ಕಡೆಯಿಂದ ಪಳ್ಳಿ ಕಡೆಗೆ ಬರುತ್ತಿದ್ದ KA-20-AB-8145 ನೇ ನಂಬ್ರದ ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಬೈಕ್ ಸವಾರರು ಗಾಯಗೊಂಡ ಘಟನೆ ಡಿ.2ರಂದು ನಡೆದಿದೆ.
ಪಳ್ಳಿ ನಿವಾಸಿ ಆದರ್ಶ್ (20), ತನ್ನ ಬೈಕಿನಲ್ಲಿ ಆದಿತ್ಯ ಎಂಬವರನ್ನು ಕೂರಿಸಿಕೊಂಡು ಉಡುಪಿಯಿಂದ ಕಾರ್ಕಳದ ಕಡೆಗೆ ಬರುತ್ತಿರುವಾಗ ಪಳ್ಳಿ ಗ್ರಾಮದ ಮದ್ಮಲ್‌ಪಾದೆ ಎಂಬಲ್ಲಿ ಘಟನೆ ನಡೆದಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.