ಕಾರ್ಕಳ

ನಾರಾವಿ ಮಹಾ ಚಂಡಿಕಾ ಯಾಗ -2024: ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಪಶ್ಚಿಮಘಟ್ಟದ ದಟ್ಟ ಕಾನನದ ತಪ್ಪಲಿನ ಪುಟ್ಟ ಸುಗ್ರಾಮ ನಾರಾವಿಯಲ್ಲಿ ನಡೆಯಲಿರುವ ಮಹಾ ಚಂಡಿಕಾ ಯಾಗ 22 ಡಿಸೆಂಬರ್ 2024 ಐತಿಹಾಸಿಕ ಧಾರ್ಮಿಕ ಕ್ಷಣಕ್ಕೆ ಭಕ್ತಿಯಕ್ಕರೆಯ ಕರೆಯೋಲೆ ನೀಡುವ ಭಕ್ತಿಯುದ್ದೇಶದ ಆಮಂತ್ರಣ ಪತ್ರಿಕೆ ಬಿಡುಗಡೆಯ ಕಾರ್ಯಕ್ರಮವು ಶ್ರೀ ಉಮಾಮಹೇಶ್ವರ ದೇವಸ್ಥಾನ ಮರೋಡಿ ಇದರ ಆಡಳಿತ ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಖ್ಯಾತ ಉದ್ಯಮಿ ಹಿಂದೂ ಧಾರ್ಮಿಕ ಮುಖಂಡ ರವೀಂದ್ರ ಶೆಟ್ಟಿ ಬಜಗೋಳಿ ಮತ್ತು ಜನ ಸ್ನೇಹಿ ಬಡವರ ಬಂಧು ಪ್ರಖ್ಯಾತ ವೈದ್ಯರಾದ ಡಾ. ಪ್ರಸಾದ್ ಬಿ. ವಿಜಯ ಕ್ಲಿನಿಕ್ ಇವರ ಉಪಸ್ಥಿತಿಯಲ್ಲಿ ಅ. 13ರಂದು ಶ್ರೀ ಸೂರ್ಯನಾರಾಯಣ ದೇವಸ್ಥಾನ ವಠಾರದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ನಾರಾವಿ ಶ್ರೀ ಸೂರ್ಯ ಪ್ರೆಂಡ್ಸ್‌ನ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಆಚಾರ್ಯ, ಹೊಸ್ಮಾರು ರಿಕ್ಷಾ ಚಾಲಕ ಮಾಲಕರ ಸಂಘ ಅಧ್ಯಕ್ಷ ಪ್ರವೀಣ್ ಪೂಜಾರಿ, ಸುಲ್ಕೇರಿ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸುನೀಲ್ ಪೂಜಾರಿ,  ಸುಲ್ಕೇರಿ ಲಯನ್ಸ್ ಕಬ್ಲ್‌ನ ಅಧ್ಯಕ್ಷ ರವಿ ಶೆಟ್ಟಿ, ಮಹಮ್ಮಾಯಿ ಪ್ರೆಂಡ್ಸ್ ನಮ್ಮ ಜವನೇರ್ ಮಂಜುನಗರ ಇದರ ಅಧ್ಯಕ್ಷ ಚೆಲುವ ರಾಜ್, ಹೊಸ್ಮಾರ್ ಪ್ರೆಂಡ್ಸ್‌ನ ಅಧ್ಯಕ್ಷ ಪ್ರಮೋದ್ ಕುಲಾಲ್, ಕೂತ್ಲೂರು ಆದಿತ್ಯ ಪ್ರೆಂಡ್ಸ್‌ಮ ಅಧ್ಯಕ್ಷ ಪ್ರಜ್ಞೇಶ್ ಪೂಜಾರಿ, ಹೊಸ್ಮಾರ್ ವಲಯ ಶ್ರೀ. ಕ್ಷೆ. ಧ. ಗ್ರಾ. ಯೋಜನೆಯ ಮೇಲ್ವಿಚಾರಕರಾದ ಮನೋಜ್ ಹೆಗ್ಡೆ, ಬನ್ನಡ್ಕ ವಿವೇಕಾನಂದ ಘಟಕದ ಅಧ್ಯಕ್ಷ ಪೂವಪ್ಪ ಪೂಜಾರಿ, ಕೂತ್ಲೂರು ಕುಂಭಕಂಠಿಣಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಮಧುಸೂದನ್, ಈದು ಶ್ರೀ ಮುಕಾಂಬಿಕಾ ಯುವಕ ಮಂಡಲದ ಅಧ್ಯಕ್ಷ ಯೋಗೀಶ್ ಪೂಜಾರಿ, ನೂರಾಳ್ ಬೆಟ್ಟು ಕೆ. ಕೆ. ಪ್ರೆಂಡ್ಸ್‌ನ ಅಧ್ಯಕ್ಷ ಸೂರಜ್ ಜೈನ್, ಪೊಸರಡ್ಕ ಮಹಮ್ಮಾಯಿ ಪ್ರೆಂಡ್ಸ್‌ನ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಗುಮ್ಮೆತ್ತು ಮಂಜುಶ್ರೀ ಕಲಾವೃಂದದ ಅಧ್ಯಕ್ಷ ಯಶೋಧರ ಪೂಜಾರಿ, ಬೊಟ್ಟು ಜವನೇರ್ ನಾರಾವಿ ಇದರ ಅಧ್ಯಕ್ಷ ಪ್ರಸಾದ್ ಪೂಜಾರಿ, ಈದು ಭಗತ್ ಸಿಂಗ್ ಘಟಕದ ಅಧ್ಯಕ್ಷ ದಿನೇಶ್ ಪೂಜಾರಿ ಸಂಪಿಗೆದಡಿ, ಪಲಾರಗೋಳಿ ಆದಿಶಕ್ತಿ ಪ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಹರೀಶ್ಚಂದ್ರ ಸಾಲಿಯಾನ್, ಪೆಜತ್ತಕಟ್ಟೆ ಶ್ರೀ ಗುರು ಪ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಉಮೇಶ್ ಸಾಲಿಯಾನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಗಣಿತ ನಗರ :-ಕಾರ್ಕಳ ಜ್ಞಾನಸುಧಾ ಜಂಪ್ ರೋಪ್ ನಲ್ಲಿ ರಾಜ್ಯಮಟ್ಟಕ್ಕೆ

Madhyama Bimba

ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ ಜಯಂತಿ

Madhyama Bimba

 ನಿಟ್ಟೆ ಶ್ರೀ ರಾಜ ರಾಜೇಶ್ವರಿ ಸದ್ಗುರು ಶ್ರೀ ನಿತ್ಯಾನಂದ ಕ್ಷೇತ್ರ ನೆಲ್ಲಿ ಇದರ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುನಿಲ್ ಕುಮಾರ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More