ಕಾರ್ಕಳ: ಕಾಂತಾವರ ನಿವಾಸಿ ಗೋಪಿ (66), ಎಂಬವರು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ವ್ಯಕ್ತಿಯೋರ್ವ ವಿಳಾಸ ಕೇಳುವ ನೆಪದಲ್ಲಿ ಗೋಪಿಯವರ ಕುತ್ತಿಗೆಯಲ್ಲಿದ್ದ ಚಿನ್ನವನ್ನು ಕಳ್ಳತನ ಮಾಡಿರು ಘಟನೆಯು ಡಿ. 2ರಂದು ನಡೆದಿದೆ.
ಗೋಪಿ ಕಾಂತೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿ, ವಾಪಾಸು ಕಾಂತಾವರ ಗ್ರಾಮದ ಅಂಬರೀಶ ಗುಹೆ ಸಮೀಪ ಹಾದು ಹೋಗುವ ಬಾರಾಡಿ-ಕಾಂತವರಕ್ಕೆ ಹೋಗುವ ರಸ್ತೆಯಲ್ಲಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ.
ಕಳ್ಳತನವಾದ ಚಿನ್ನದ ಮೌಲ್ಯ ರೂ. 1,20,000ಎಂದು ಅಂದಾಜಿಸಲಾಗಿದೆ.
ಆಪಾದಿತನು ಚಿನ್ನದ ಚೈನನ್ನು ಬಲವಂತವಾಗಿ ಎಳೆದುಕೊಂಡು ಹೋಗುವ ಕೈಗಳಿಂದ ಬಲವಾಗಿ ತಳ್ಳಿದ ಪರಿಣಾಮ ಗೋಪಿಯವರ ಎಡಕೈಗೆ, ಕುತ್ತಿಗೆಗೆ, ತೋಳಿಗೆ ನೋವು ಮತ್ತು ಗಾಯವಾಗಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.