ನಾಲ್ಕೂರು ನರಸಿಂಗರಾವ್ ಸ್ಮಾರಕ ಸರಕಾರಿ ಪದವಿಪೂರ್ವ ಕಾಲೇಜು ಶಿರ್ಲಾಲು ಪ್ರೌಢಶಾಲಾ ವಿಭಾಗ ಇದರ ರಜತ ಮಹೋತ್ಸವ ಸಂಭ್ರಮವು ಡಿ. 05 ಗುರುವಾರದಿಂದ ಡಿ. 07 ಶನಿವಾರದವರೆಗೆ ನಡೆಯಲಿದೆ.
ಡಿ. 05 ರಂದು ಪೂರ್ವಾಹ್ನ ಗಂಟೆ 8.00ಕ್ಕೆ ಧ್ವಜಾರೋಹಣ, ಪೂರ್ವಾಹ್ನ ಗಂಟೆ 9.30ರಿಂದ ಪ್ರೌಢಶಾಲಾ ರಚನಾ ಸಮಿತಿಯ ಸದಸ್ಯರಿಗೆ ಗೌರವಾರ್ಪಣೆ, ಪ್ರೌಢಶಾಲಾ ಹಾಗೂ ಕಾಲೇಜು ವಿಭಾಗದ ಪ್ರತಿಭಾ ಪುರಸ್ಕಾರ, ಸಂಜೆ ಗಂಟೆ 4.00 ರಿಂದ ಶಿರ್ಲಾಲು ಗ್ರಾಮದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಗಂಟೆ 5.00ರಿಂದ ಪ್ರೌಢಶಾಲಾ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6.30ರಿಂದ: ರಜತ ಮಹೋತ್ಸವದ ಉದ್ಘಾಟನೆ, ರಜತ ಮಹೋತ್ಸವ ಕಟ್ಟಡದ ಉದ್ಘಾಟನೆ, ದಾನಿಗಳ ನಾಮಫಲಕ ಅನಾವರಣ, ಪದವಿಪೂರ್ವ ವಿಭಾಗದ ನೂತನ ವಿವೇಕ ಕೊಠಡಿ ಉದ್ಘಾಟನೆ ಹಾಗೂ ಸ್ವರ್ಣ ಪದಕ ಪ್ರದಾನ ಸಮಾರಂಭ’ ನಡೆಯಲಿದೆ.
ಈ ಸಂದರ್ಭದಲ್ಲಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಸರಕಾರಿ ಶಾಲೆಗಳ ಕನ್ನಡ ಮಾಧ್ಯಮ ವಿಭಾಗದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುವ ಸಂಸ್ಥೆಯ ವಿದ್ಯಾರ್ಥಿನಿ ಕು| ವಿನಮ್ರ ಆಚಾರ್ಯ ಇವರನ್ನು ಗೌರವಿಸಲಾಗುವುದು.
ರಾತ್ರಿ 7.30ರಿಂದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 8.30ರಿಂದ ಹಳೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಲಾವಿದರಿಂದ “ಗುತ್ತುದ ಗುರ್ಕಾರೆ” ನಾಟಕ ಪ್ರದರ್ಶನಗೊಳ್ಳಲಿದೆ.
ಡಿ.06 ರಂದು ಕಾರ್ಕಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಬೆಳಿಗ್ಗೆ 8.30ಕ್ಕೆ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಭವ್ಯ ಪುರಮೆರವಣಿಗೆಯು ಶಿರ್ಲಾಲು ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯಿಂದ ಪ್ರಾರಂಭಗೊಂಡು ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರಕಾರಿ ಪದವಿ ಪೂರ್ವಕಾಲೇಜಿನವರೆಗೆ ನಡೆಯಲಿದೆ. ಗಂಟೆ 10.00ರಿಂದ ಕಾರ್ಕಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ, ಸಂಜೆ ಗಂಟೆ 6.00ರಿಂದ ಕೆರ್ವಾಶೆ ಗ್ರಾಮದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗಂಟೆ 8.00ರಿಂದ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಜರಗಲಿದೆ.
ಡಿ .07ರಂದು ಬೆಳಿಗ್ಗೆ 9.30ರಿಂದ ಪ್ರೌಢಶಾಲಾ ಮತ್ತು ಕಾಲೇಜು ವಿಭಾಗದ ವ್ಯಾಪ್ತಿಯ ಗ್ರಾಮಸ್ಥರಿಗೆ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಛದ್ಮವೇಷ ಹಾಗೂ ಗಾಯನ ಸ್ಫರ್ಧೆ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 4.00ರಿಂದ ಅಂಡಾರು ಗ್ರಾಮದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಗಂಟೆ 5.00ರಿಂದ ಪೂರ್ವ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭ, ರಾತ್ರಿ 7.30ರಿಂದ ಪೂರ್ವ ವಿದ್ಯಾರ್ಥಿಗಳಿಂದ ಭರತನಾಟ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ೮.೩೦ರಿಂದ ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಪೌರಾಣಿಕ ಯಕ್ಷಗಾನ ಬಯಲಾಟ: ’ಭಾರ್ಗವ ವಿಜಯ’ ನಡೆಯಲಿದೆ. 9.30ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, 11.00 ಗಂಟೆಯಿಂದ ಚೈತನ್ಯ ಕಲಾವಿದರು ಬೈಲೂರು ಇವರಿಂದ ‘ಅಷ್ಟೆಮಿ’ ನಾಟಕ ಪ್ರದರ್ಶನಗೊಳ್ಳಲಿದೆ.
ಈ ವಿದ್ಯಾಸಂಸ್ಥೆಯ ಸಾವಿರಾರು ಹಳೆ ವಿದ್ಯಾರ್ಥಿಗಳು ಪ್ರತ್ಯೇಕ ಹಾಗೂ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದು, ಪ್ರಸ್ತುತ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶೀತಲ್ ಜೈನ್, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಗುಣಪಾಲ ಕಡಂಬ, ಕೋಶಾಧಿಕಾರಿ ರವೀಂದ್ರ ಎಸ್. ಪೂಜಾರಿ, ಸಂದೀಪ್ ಪೂಜಾರಿ, ಶಾಲಾ ಮುಖ್ಯ ಶಿಕ್ಷಕರಾದ ನರಸಿಂಹ ನಾಯಕ್, ಸಹಶಿಕ್ಷಕರಾದ ನಾರಾಯಣ ಪೂಜಾರಿ, ಶ್ರೀಮತಿ ಮಹಾಲಕ್ಷ್ಮೀ, ಸತೀಶ್ ವಡ್ಡರ್ಸೆ, ಶ್ರೀಮತಿ ವಿಜಯಲಕ್ಷ್ಮೀ, ಅತಿಥಿ ಶಿಕ್ಷಕರಾದ ಚಾಂದಿನಿ, ಹಾಗೂ ಕಾಲೇಜು ವಿಭಾಗದ ಪ್ರಾಂಶುಪಾಲರಾದ ಬೇಬಿ ಕೆ. ಈಶ್ವರಮಂಗಲ ಹಾಗೂ ಉಪನ್ಯಾಸಕರಾದ ಶ್ರೀಮತಿ ಬಬಿತಾ ಪ್ರಸಾದ್, ಉದಯ ದೇವಾಡಿಗ, ಅತಿಥಿ ಉಪನ್ಯಾಸಕರಾದ ಸುಮಿತ್ರಾ ಕೆ., ರಾಜಶ್ರೀ ಜೈನ್, ಬಬಿತಾ, ಶ್ವೇತಾ, ದಿವ್ಯಾ ಜಿ. ರಜತ ಮಹೋತ್ಸವ ಸಂಭ್ರಮಕ್ಕೆ ನಿರಂತರ ಶ್ರಮಿಸುತ್ತಿದ್ದಾರೆ.