ಮೂಡುಬಿದಿರೆ: ಹೊಸ ವಿದ್ಯಾಸಂಸ್ಥೆಗಳು ತೆರೆದುಕೊಳ್ಳುವಾಗ ರಾಷ್ಟ್ರ ಕಟ್ಟಿದ ನಾಯಕರನ್ನು ಮರೆಯುವುದು ಸರಿಯಲ್ಲ. ರಾಷ್ಟ್ರಪ್ರೇಮದ ದ್ಯೋತಕವಾಗಿ ವಿದ್ಯಾಸಂಸ್ಥೆಗಳಿಗೆ ರಾಷ್ಟ್ರೀಯ ಹೆಸರನ್ನಿಟ್ಟು ರಾಷ್ಟ್ರಪ್ರೇಮ ಪ್ರದರ್ಶಿಸುವ ಅಗತ್ಯವಿದೆ ಎಂದು ಬಾಬುರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ಅಧ್ಯಕ್ಷರೂ ಆಗಿರುವ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ನುಡಿದರು.
ಇಲ್ಲಿನ ಬಿ. ಆರ್.ಪಿ. ಪ್ರೌಢಶಾಲೆಯಲ್ಲಿ ಡಿ. 3 ರಂದು ಸಂಜೆ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಕ್ಷಣದ ಜೊತೆಗೆ ಆಟ, ನಾಟಕ ಎಲ್ಲವೂ ವಿದ್ಯಾರ್ಥಿಗಳ ಪ್ರತಿಭೆ ಹೆಚ್ಚಿಸಲು ಪೂರಕವಾಗಿರುತ್ತದೆ. ಕಲಿಕೆಯ ಯಶಸ್ಸಿನ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯೂ ವೈಬ್ರೆಂಟ್ ಪಿ.ಯು. ಕಾಲೇಜಿನ ಅಧ್ಯಕ್ಷ ಚಂದ್ರಶೇಕಜರ ರಾಜೆ ಅರಸ್ ಅವರು ಮಾತನಾಡಿ ಹಿಂದೆ ಮಾತಾ ಪಿತೃಗಳಿಂದ ಮತ್ತು ಗುರುಕುಲ ವ್ಯವಸ್ಥೆಯಲ್ಲಿ ಮಕ್ಕಳು ವಿದ್ಯೆ ಕಲಿಯುತ್ತಿದ್ದರು. ಸ್ವಾತಂತ್ರ್ಯ ಬಂದೆ ನಂತರ ಮಕ್ಕಳು ಹೊರ ಪ್ರಪಂಚಕ್ಕೆ ತೆರೆದು ಕೊಳ್ಳಬೇಕಾದರೆ ಶಾಲಾ ಶಿಕ್ಷಣದ ಅಗತ್ಯವಿದೆ ಎಂಬುದನ್ನು ಆರಿತು ಸರಕಾರ ಈ ವ್ಯವಸ್ಥೆಯನ್ನು ಜಾರಿಗೆ ತಂದಿತು. ಇಂದು ದೇಶದಲ್ಲಿ ಶಿಕ್ಷಣ ಪ್ರಭಾವಶಾಲಿಯಾಗಿ ಬೆಳೆಯುತ್ತಿದ್ದು ಸಾಮಾನ್ಯ ಜ್ಞಾನವೂ ಅಂಕಗಳಷ್ಟೆ ಮುಖ್ಯ ಎಂಬುದನು ವಿದ್ಯಾರ್ಥಿಗಳು ಅರಿತುಕೊಳ್ಳ ಬೇಕಾಗಿದೆ ಎಂದರು.
ಮೂಡ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಮಡುಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.. ನಿವೃತ್ತಿಯ ಸನ್ಮಾನ ಪಡೆದ ದೈಹಿಕ ಶಿಕ್ಷಣ ಅಧ್ಯಾಪಕ ಕ್ಲೆಮೆಂಟ್ ಡಿಸೋಜ ಶುಭ ಹಾರೈಸಿದರು.
ಶಾಲಾ ಆಡಳಿತ ಮಂಡಳಿಯ ರಾಮನಾಥ್ ಭಟ್, ಉಪಾಧ್ಯಕ್ಷರುಗಳಾದ ಪುಷ್ಪರಾಜ್ ಜೈನ್, ಪಿ. ರಾಮಪ್ರಸಾದ್ ಭಟ್, ಕೋಶಾಧಿಕಾರಿ ದಾಮೋದರ್, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಾ. ರಾಮಕೃಷ್ಣ ಮುಖ್ಯೋಪಾಧ್ಯಾಯಿನಿ ತೆರೇಸಾ ಕರ್ದೋಜಾ, ನಿವೃತ್ತ ಮುಖ್ಯೋಪಾಧ್ಯಾಯಿನಿ ಪದ್ಮಜಾ ಕೆ.. ಮನೋಜ್ ಕುಮಾರ್ ಶೆಟ್ಟಿ, ವೆಂಕಟೇಶ್ ಕಾಮತ್, ನ್ಯಾಯವಾದಿ ಮನೋಜ್ ಶೆಣೈ, ಹಳೆ ವಿದ್ಯಾರ್ಥಿಗಳಾದ ದಿನೇಶ್ ಕಾಮತ್, ಸಚಿನ್ ಆಚಾರ್ಯ ಬಹುವಮಾನ ವಿತರಿಸಿದರು.
ವಿದ್ಯಾರ್ಥಿ ನಾಯಕ ಆಕಾಶ್ ಉಪಸ್ಥಿತರಿದ್ದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕ್ಷಮೆಂಟ್ ಡಿಸೋಜ, ಅಪೋಲಿನ್ ಮೋನಿಸ್ ದಂಪತಿಗಳನ್ನು, ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಚಂದ್ರಶೇಖರ ರಾಜೆ ಅರಸ್, ಹರ್ಷವರ್ಧನ ಪಡಿವಾಳ್, ಮನೋಜ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶಾಲೆಗೆ ನಿರಂತರ ಸಹಕಾರ ನೀಡುತ್ತಿರುವ ಅಮೀನಾ, ರಾಘವೇಂದ್ರ ಶೆಟ್ಟಿ, ರಂಜನ್, ಯಜೇಶ್, ಕ್ರಿಸ್ಟಿನ್, ಗಣೇಶ್ ಪೈ. ಹರೀಶ್. ರಶ್ಮಿತಾ ಪ್ರಸಾದ್ ಶೆಟ್ಟಿ, ವಾಣಿಶ್ರೀ ಕಾಂತಾವರ ಅವರನ್ನು ಗೌರವಿಸಲಾಯಿತು. ಅತ್ಯುತ್ತಮ ಪಿ. ವಿದ್ಯಾರ್ಥಿಗಳಾದ ಆಕರ್ಶ್ ಮತ್ತು ಕು. ಹೇಮಾ ಅವರನ್ನು ಅಭಿನಂದಿಸಲಾಯಿತು. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಭಾಗೀರತಿ, ಅನುಶ್ ಆಚಾರ್ಯ ಮೇಘಾ, ಜೈನಾಬ್, ಅಂಕಿತಾ, ಕಿಶನ್ ಮತ್ತು ಸೋಮೇಶ್ ಅವರಲ್ಲದೆ ಪ್ರಸಕ್ತ ಸಾಲಿನಲ್ಲಿ ಉತ್ತಮ ನಿರ್ವಹಣೆ ನೀಡುತ್ತಿರುವ ವಿದ್ಯಾರ್ಥಿಗಳನ್ನು ನಗದು ಬಹುಮಾನದೊಂದಿಗೆ ಪುರಸ್ಕರಿಸ ಲಾಯಿತು. ಮೇಬಲ್ ಮೆಂಡೋನಾ, ಪ್ರತಿಮಾ ಮತ್ತು ಭರತ್ ನಾಯ್ಕ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.
ಶಂಕರ ಭಟ್ ಬಹುಮಾನಿತರ ಪಟ್ಟಿ ವಾಚಿಸಿದರು.ಮುಖ್ಯೋಪಾಧ್ಯಾಯನಿ ತೆರೇಜಾ ಕರ್ಡೋಜಾ ವರದಿ ವಾಚಿಸಿದರು. ఆಕಶ್೯ ಮತ್ತು ತಂಡದವರು ಪ್ರಾರ್ಥಿಸಿದರು. ವೆಂಕಟರಮಣ ಕೆರೆಗದ್ದೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಿರಣ್ ಕುಮಾರ್ ವಂದಿಸಿದರು.