ಕಾರ್ಕಳ: ಬೆಳುವಾಯಿ ಕಡೆಯಿಂದ ರೆಂಜಾಳ ಮಾರ್ಗವಾಗಿ ಕಾರ್ಕಳ ಕಡೆಗೆ ಅಕ್ರಮ ಮರಳು ಸಾಗಾಟ ಲಾರಿಯನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬರುವಾಗ ರೆಂಜಾಳ ಗ್ರಾಮದ ಪೆರಾಲ್ದಬೆಟ್ಟು ಕ್ರಾಸ್ ಬಸ್ಸು ನಿಲ್ದಾಣ ಬಳಿ ತಿರುವಿನಲ್ಲಿ ಅಪಘಾತಕ್ಕೀಡಾದ ಘಟನೆ ಡಿ. 3ರಂದು ರಾತ್ರಿ 9.30 ಗಂಟೆಗೆ ನಡೆದಿದೆ.
ಟಿಪ್ಪರ್ ನಂಬ್ರ KL-25-D-1078 ನೇಯದರ ಚಾಲಕ, ಅದರ ಮಾಲಕ ಮತ್ತು ಕ್ಲೀನರ್ ಇವರುಗಳು ಸಂಘಟಿತರಾಗಿ ಮರಳನ್ನು ಸಾಗಾಟ ಮಾಡುವ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಟಿಪ್ಪರಿನಲ್ಲಿ 2 ಯುನಿಟ್ ಮರಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.