ಹೆಬ್ರಿ: ನಾಡ್ಪಾಲು ನಿವಾಸಿ ಸುಜಾತ ಎಂಬವರು ನೆಲ್ಲಿಕಟ್ಟೆ ಕ್ರಾಸ್ ಬಳಿ ನಡೆಸುತ್ತಿದ್ದ ಸುಜಾತಾ ಸ್ಟೋರ್ ಎಂಬ ಅಂಗಡಿಗೆ ಡಿ. 3ರಂದು ಕಳ್ಳರು ನುಗ್ಗಿ ರೂ. 5000ಮೌಲ್ಯದ ಅಂಗಡಿ ಸಾಮಾನುಗಳನ್ನು ಕಳ್ಳರು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಡಿ. 3ರಂದು ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು ಮರು ದಿನ ಡಿ. 4 ರಂದು ಅಂಗಡಿ ತೆರೆಯಲು ಬಂದಾಗ ಅಂಗಡಿಯಲ್ಲಿ ಕಳ್ಳತನ ಆಗಿರುವ ಬಗ್ಗೆ ತಿಳಿದು ಬಂದಿದೆ.
ಯಾರೋ ಕಳ್ಳರು ಅಂಗಡಿಯ ಶಟರ್‌ನ ಬೀಗ ಒಡೆಯಲು ಪ್ರಯತ್ನ ಪಟ್ಟಿದ್ದು ಅದು ಸಾದ್ಯವಾಗದೇ ಇದ್ದಾಗ ಅಂಗಡಿಯ ಒಂದು ಕೋಣೆಯ ಹಂಚು ತೆಗೆದು ಅಂಗಡಿ ಒಳಗೆ ಹೋಗಿ ಅಂಗಡಿಯ ಒಂದು ಬಾಗಿಲು ಒಡೆದು ಅಂಗಡಿಯ ಒಳ ಹೊಕ್ಕಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.