ದಕ್ಷಿಣ ಕನ್ನಡ: ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ಸಂಸ್ಥೆಯ ಸಂಯೋಜನೆಯಲ್ಲಿ ಐ ಟಿ ಸಿ ಆಶಿರ್ವಾದ್ ಸ್ಮಾರ್ಟ್ ಇಂಡಿಯಾ” ಸಹಭಾಗಿತ್ವದೊಂದಿಗೆ ದಕ್ಷಿಣ ಕನ್ನಡದಲ್ಲಿ ಸಮಾಜ ಸೇವೆಯನ್ನು ಆರೋಗ್ಯ ಮತ್ತು ಶಿಕ್ಷಣದ ಕಡೆ ವಿಸ್ತರಿಸಿದ್ದು ಎಲಿಮಲೆ ಸರಕಾರಿ ಪ್ರೌಢ ಶಾಲೆಗೆ ಫೆ. 20ರಂದು ಸ್ಮಾರ್ಟ್ ಟಿವಿ ಕೊಡುಗೆ ಹಾಗೂ ಅಯೋಡಿನ್ ಮತ್ತು ಸೂಕ್ಷ್ಮ ಪೋಷಕಾಂಶಗಳ ಬಗೆಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಮಾಜ ಸೇವೆ ಮತ್ತು ಮಕ್ಕಳ ಆರೋಗ್ಯ ಎಂಬ ಧ್ಯೇಯದೊಂದಿಗೆ ಈ ಮೇಲಿನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಸಂಯೋಜಕರಾದ ಗಣೇಶ್ ಬಂಗಾಡಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ನಡೆದ ಸರಳ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಧನಂಜಯ ಬಾಳೆತೋಟ ವಹಿಸಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ರವರು ಸ್ಮಾರ್ಟ್ ಟಿವಿ ಹಾಗೂ ಆರೋಗ್ಯಕರ ಆಹಾರದ ಸಲಹೆ ಭಿತ್ತಿ ಚಿತ್ರವನ್ನು ಅನಾವರಣಗೊಳಿಸಿದರು.
ಎಲಿಮಲೆ ಸಮುದಾಯ ಆರೋಗ್ಯ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಗಳಾದ ಕುಮಾರಿ ಮೋನಿಷಾ ಇವರು ಅಯೋಡಿನ್ ಮತ್ತು ಸೂಕ್ಷ್ಮ ಪೋಷಕಾಂಶಗಳ ಬಗೆಗೆ ವಿಧ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಸೇವಾಜೆ, ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಧ್ಯಕ್ಷರಾದ ರಾಜೇಶ್ ಅಂಬೆಕಲ್ಲು, ಐ ಜೆ ಡಿ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಗಣೇಶ್ ಬಂಗಾಡಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಕೆ, ಎಸ್ ಡಿ ಎಂ ಸಿ ಸದಸ್ಯರಾದ ಪುರುಷೋತ್ತಮ , ಕೃಷ್ಣಪ್ಪ ಗೌಡ ಹರ್ಲಡ್ಕ, ಮಾಧವ ಶೀರಡ್ಕ, ಅಚ್ಚುತ ಮುಂಡೋಕಜೆ, ವಿಶಾಲಾಕ್ಷಿ, ಲೀಲಾವತಿ ಹರ್ಲಡ್ಕ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಪ್ರಸ್ತಾವನೆಯನ್ನು ಮತ್ತು ಉಪಯೋಗ ಮತ್ತು ಅವಶ್ಯಕತೆಯನ್ನು ಜಿಲ್ಲಾ ಸಂಯೋಜಕರಾದ ಗಣೇಶ್ ಬಂಗಾಡಿ ವಿವರಿಸಿದರು.
ಐ ಜಿ ಡಿ ಸಂಸ್ಥೆಯ ತಾಲೂಕು ಸಂಯೋಜಕರಾದ ಜ್ಞಾನೇಶ್(ಸುಳ್ಯ), ಪ್ರಜ್ಞಾ (ಕಡಬ), ಪವಿತ್ರ (ಪುತ್ತೂರು) ರಮಿತ (ಬೆಳ್ತಂಗಡಿ), ಚೈತ್ರ (ಮಂಗಳೂರು). ದೇವಚಳ್ಳ ಗ್ರಾಮ ಪಂಚಾಯತ್ ಗ್ರಂಥಪಾಲಕರಾದ ಪ್ರಫುಲ್ಲ ಶ್ರೀಕಾಂತ್ ಪಾರೆಪ್ಪಾಡಿ, ಕೇಶವ ಕಾಯರ ,ಶಿಕ್ಷಕರು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ಮುರಳೀಧರ ಪುನುಕುಟ್ಟಿ ಸ್ವಾಗತಿಸಿ ,ರಮಿತ ಧನ್ಯವಾದ ಅರ್ಪಿಸಿದರು ಕುಮಾರಿ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.