ಕಾರ್ಕಳ: ಶಾಲಾ ಶೀಕ್ಷಣ ಇಲಾಖೆ ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ, ಶ್ರೀಮದ್ ಭುವನೇಂದ್ರ ಪ್ರೌಢಶಾಲೆ ಕಾರ್ಕಳ ಇವರ ಸಹಯೋಗದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಾರ್ಕಳ ಕ್ರೈಸ್ಟ್‌ಕಿಂಗ್ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಒಟ್ಟು ಏಳು ವಿದ್ಯಾರ್ಥಿಗಳು ಮೂರು ವಿಭಾಗದ ಸ್ಪರ್ಧೆಗಳಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಕೀರ್ತನ್ ಡಿ’ಸೋಜ, ಗಝಲ್‌ನಲ್ಲಿ ಪ್ರಥಮ ವಿಜ್ಞಾನ ವಿಭಾಗದ ಸ್ಮೃತಿ ಮರಾಠೆ, ಕವ್ವಾಲಿಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ನೈತಿಕ್ ಶೆಟ್ಟಿ, ಐಫಾ ಫರ್‍ಹಾನ, ಭುವನ್, ಪ್ರಥಮ ವಿಜ್ಞಾನ ವಿಭಾಗದ ಸ್ಮೃತಿ ಮರಾಠೆ, ಒಂಬತ್ತನೇ ತರಗತಿಯ ಶ್ರೀಶಾ ಪ್ರಭು, ರೇಚಲ್ ಡಿ’ಸೋಜ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಉಳಿದಂತೆ ಚಿತ್ರಕಲೆಯಲ್ಲಿ ಹತ್ತನೇ ತರಗತಿಯ ಸೃಷ್ಟಿ ಭಂಡಾರಿ ದ್ವಿತೀಯ ಸ್ಥಾನ, ಜಾನಪದ ಗೀತೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ರಶ್ಮಿತಾ ತೃತೀಯ ಸ್ಥಾನ, ಭರತನಾಟ್ಯದಲ್ಲಿ ಎಂಟನೇ ತರಗತಿಯ ಮನಶ್ರೀ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.