ಮೂಡುಬಿದಿರೆಯಲ್ಲಿ ಚಿನ್ನದ ಮಿಷನ್ ಕಟ್ಟಿಂಗ್ ವ್ಯವಹಾರ ನಡೆಸುತ್ತಿದ್ದ ಸೀತಾರಾಮ್ ಆಚಾರ್(49 ವ.) ಕೊನೆಯುಸಿರೆಳೆದಿದ್ದಾರೆ.
ಪಡುಮಾರ್ನಾಡು ಬನ್ನಡ್ಕ ಬಳಿ ದ್ವಿ ಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಅವರು ಅಫಘಾತಕ್ಕೊಳಗಾಗಿದ್ದರು. ಅವರನ್ನು ಆಸ್ಪತ್ರೆ ಕರೆದೊಯ್ಯುತ್ತಿದ್ದಂತೆ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಮೃತರು ಪತ್ನಿ, ಪುತ್ರ ಪುತ್ರಿ ಸೇರಿದಂತೆ ಬಂಧು ಮಿತ್ರರನ್ನು ಅಗಲಿದ್ದಾರೆ.