District

ಬೈಲೂರು ಪರಶುರಾಮ ಥೀಮ್ ಪಾರ್ಕ್ ಕೃಷ್ಣ ನಾಯ್ಕ್ ಗೆ ಜಾಮೀನು ಮಂಜೂರು

ಕಾರ್ಕಳ: ಬೈಲೂರು ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಮೂರ್ತಿ ನಿರ್ಮಾಣ ಮಾಡಿರುವ ಕೃಷ್ ಆರ್ಟ್ ವಲ್ಡ್‌ನ ಶಿಲ್ಪಿ ಕೃಷ್ಣ ನಾಯ್ಕ್‌ಗೆ ಜಾಮೀನು ಮಂಜೂರು ಆಗಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಲ್ಪಿ ಕೃಷ್ಣ ನಾಯ್ಕ್‌ಗೆ ಡಿ. 7ರಂದು ಜಾಮೀನು ಮಂಜೂರುಗೋಳಿಸಿದೆ
ಬೈಲೂರು ಪರಶುರಾಮ ಥೀಮ್ ಪಾರ್ಕಿನಲ್ಲಿ ನಿರ್ಮಿಸಿದ ಮೂರ್ತಿಯ ವಿಚಾರದಲ್ಲಿ ಕೃಷ್ಣ ಶೆಟ್ಟಿ ಬಜಗೋಳಿಯವರು ಶಿಲ್ಪಿ ವಿರುದ್ಧ ದೂರು ದಾಖಲಿಸಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ನ. 4 ರಂದು ವಿಚಾರಣೆ ನಡೆದಿತ್ತು. ನಾಯಾಧೀಶರು
ವಾದ ಪ್ರತಿವಾದವನ್ನು ಆಲಿಸಿ ನಿರೀಕ್ಷಣಾ ಜಾಮೀನನ್ನು ನ. 7ಕ್ಕೆ ಕಾಯ್ದಿರಿಸಿದ್ದರು. ಆದರೆ ನ. 7ರಂದು ಕಾಯ್ದಿರಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯು ತಿರಸ್ಕಾರವಾಗಿತ್ತು. ಇದರಿಂದ ಕಾರ್ಕಳ ನಗರ ಪೊಲೀಸರು ನ. 10 ರಂದು ಶಿಲ್ಪಿಯನ್ನು ಕೇರಳದಲ್ಲಿ ಬಂಧಿಸಿ ನ. 11 ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪೊಲೀಸರು ಹೆಚ್ಚಿನ ತನಿಖೆಗೆ ಶಿಲ್ಪಿಯನ್ನು 7 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದರು. ನಂತರ ನ. 15 ರಂದು ಪೊಲೀಸರು ಕ್ರಷ್ಣ ನಾಯ್ಕ್‌ರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ಕೃಷ್ಣ ನಾಯ್ಕ್ ಪರ ವಕೀಲರು ಜಾಮೀನಿಗಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಡಿ. 7ರಂದು ನ್ಯಾಯಾಲಯವು ಕೃಷ್ಣನಾಯಕ್ ಅವರಿಗೆ 1 ಲಕ್ಷ ವೈಯಕ್ತಿಕ ಬಾಂಡ್ ಇಬ್ಬರು ಶ್ಯೂರಿಟಿಯೊಂದಿಗೆ ಹಲವಾರು ಷರತ್ತು ಗಳೊಂದಿಗೆ ಜಾಮೀನು ಮಂಜೂರು ಗೊಳಿಸಿದೆ. ಆರೋಪಿ ಪರ ಮಟ್ಟಾರು ರತ್ನಾಕರ ಹೆಗ್ಡೆ ವಾದಿಸಿದ್ದರು

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More