Blog

ಇನ್ನಾದಲ್ಲಿ ಪವರ್ ಪ್ರಾಜೆಕ್ಟ್ ವಾರ್

ಪ್ರತಿಭಟನಾಕಾರರ ವಿರುದ್ದ ಮಾತನಾಡುವ ರೇಷ್ಮಾ ಶೆಟ್ಟಿ ಅದಾನಿಯ ವಕ್ತಾರರೇ..? ಇನ್ಙಾ ಗ್ರಾಮ ಪಂಚಾಯತ್ ಅದ್ಯಕ್ಷೆ ಸರಿತಾ ಶೆಟ್ಟಿ ಪ್ರಶ್ನೆ

ಅಧಿಕಾರದಲ್ಲಿರುವಾಗ ಇನ್ನಾ ಗ್ರಾಮಸ್ಥರ ಮೇಲೆ ಕಾಳಜಿ ಇಲ್ಲದೆ ಪವರ್ ಪ್ರಾಜೆಕ್ಟ್ ವಿದ್ಯುತ್ ಲೈನಿಗೆ ಅನುಮತಿ ನೀಡಿದ ಬಿಜೆಪಿಗರು ಇಂದು ವಿದ್ಯುತ್ ಲೈನ್ ಯೋಜನೆ ವಿರುದ್ಧ ಪ್ರತಿಭಟಿಸುತ್ತಿರುವ ಸಂತ್ರಸ್ಥರನ್ನು ಹಾಗೂ ಪ್ರತಿಭಟನಾಕಾರರನ್ನು  ನಿಂದಿಸುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಸುನಿಲ್ ಕುಮಾರ್ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ಮೋದಿ ಆಪ್ತ ಅದಾನಿಯನ್ನು ಮೆಚ್ಚಿಸಲು  ಅದಾನಿ ವಿದ್ಯುತ್ ಲೈನ್ ಯೋಜನೆಗೆ ಅನುಮತಿ ನೀಡಲಾಗಿತ್ತು.  ಇನ್ನಾ ಗ್ರಾಮಸ್ಥರನ್ನು ಕತ್ತಲೆಯಲ್ಲಿಟ್ಟು ಕೃಷಿಕರನ್ನು ಸಂತ್ರಸ್ತರನ್ನಾಗಿಸಿದವರು ಇಂದು ಪ್ರತಿಭಟನಾಕಾರರನ್ನು ನಿಂದಿಸುತ್ತಿರುವುದು ಖಂಡನಾರ್ಹ.

ಇನಾ ಗ್ರಾಮದ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಆಪೋಶನ ತೆಗೆದುಕೊಳ್ಳುತ್ತಿರುವ ವಿದ್ಯುತ್ ಲೈನ್ ಯೋಜನೆಯ ವಿರುದ್ಧ ಗ್ರಾಮಸ್ಥರೆಲ್ಲ ಒಂದಾಗಿ ಪ್ರತಿಭಟನೆ ನಡೆಸುತ್ತಿರುವಾಗ ಅದಾನಿ ಯೋಜನೆಯ ಫಲಾನುಭವಿಗಳಂತೆ ವರ್ತಿಸುತ್ತಿರುವ ಇನ್ನಾ  ಗ್ರಾಮದವರೇ ಆದ ರೇಷ್ಮಾ ಉದಯ ಶೆಟ್ಟಿ ವಿದ್ಯುತ್ ಲೈನ್ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರನ್ನು ನಿಂದಿಸುತ್ತಿರುವುದು ಖಂಡನಾರ್ಹ. ನಾಲ್ಕು ದಿನಗಳಿಂದ ಗ್ರಾಮಸ್ಥರು ಒಂದಾಗಿ ಪ್ರತಿಭಟನೆಯ ಬಗ್ಗೆ ರಾಜಕೀಯ ಪ್ರೇರಿತವಾಗಿ ಕೊಂಕು ನುಡಿಯುತ್ತಿರುವುದು ಇವರಿಗೆ ಗ್ರಾಮಸ್ಥರ ಮೇಲೆ ಎಷ್ಟು ಕಾಳಜಿ ಇದೆ  ಎನ್ನುವುದನ್ನು ಸೂಚಿಸುತ್ತದೆ.

ಬಿಜೆಪಿ ಸರ್ಕಾರ ಆಡಳಿತದಲ್ಲಿರುವಾಗ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಇಂಧನ ಸಚಿವರಾಗಿರುವಾಗ ಯೋಜನೆಗೆ ವಿರೋಧವನ್ನು ಮಾಡದೆ ಅನುಮತಿಯನ್ನು ನೀಡಿದಾಗ ರೇಷ್ಮಾ ಉದಯ ಶೆಟ್ಟಿ ಎಲ್ಲಿದ್ದರು..?

ಬಿಸಿ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿರುವ ಗ್ರಾಮಸ್ಥರು ಸಮಾನ ಮಸ್ಕರೊಂದಿಗೆ ಅಹೋರಾತ್ರಿ ಧರಣಿ ನಡೆಸುತ್ತಿದ್ದರು ಪ್ರತಿಭಟನಾ ಸ್ಥಳಕ್ಕೆ ಕ್ಷೇತ್ರದ ಶಾಸಕರಾಗಲಿ ರೇಷ್ಮಾ ಉದಯ ಶೆಟ್ಟಿಯಾಗಲಿ ಸಂಸದರಾಗಲಿ ಇಲ್ಲಿಯ ತನಕ ಭೇಟಿ ನೀಡದೆ ಇರುವುದರ ಕಾರಣವೇನು? ಪ್ರತಿಭಟನಾ ನಿರತ ಗ್ರಾಮಸ್ಥರ ಅಳಲನ್ನು ಕೇಳಲು ಹತ್ತಿರಕ್ಕೂ ಸುಳಿಯದ ಬಿಜೆಪಿಗರು ಪ್ರತಿಭಟನೆಯ ನೇತೃತ್ವವನ್ನು ವಹಿಸಿಕೊಂಡಿರುವ ಉದಯಶೆಟ್ಟಿ ಮುನಿಯಾಲು ಅವರ ವಿರುದ್ಧ ಮಾತನಾಡಲು ಯಾವ ನೈತಿಕತೆಯೂ ಇಲ್ಲ.  ಇನ್ನಾ ಗ್ರಾಮದ ರೈತರ ಪರವಾಗಿ ಪ್ರತಿಭಟನೆ ನಡೆಸಲು ಉದಯ ಶೆಟ್ಟಿ ಮುನಿಯಾಲ್ ಅವರಿಗೆ ಬಿಜೆಪಿಯ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ.

ರೇಷ್ಮಾ ಉದಯ ಶೆಟ್ಟಿ ಅವರು ಅಧಾನಿ ಕಂಪನಿಯ ಚೇಲಾಗಳಂತೆ ಮಾತನಾಡುವುದನ್ನು ಬಿಟ್ಟು ಅವರ ಪಕ್ಷದ ಸಂಸದರ ಮೂಲಕ ವಿದ್ಯುತ್ ಲೈನ್ ಕಾಮಗಾರಿ ಆರಂಭಿಸದಂತೆ ಕೇಂದ್ರ ಇಂಧನ ಸಚಿವರಿಗೆ ಒತ್ತಡ ಹಾಕಲು ಪ್ರಯತ್ನ ಪಡಲಿ.  ಕೇಂದ್ರದ ಬಿಜೆಪಿ ಸರಕಾರ ಮನಸ್ಸು ಮಾಡಿದರೆ ಇನ್ನಾ ಗ್ರಾಮದಲ್ಲಿ ಅದಾನಿ ಟವರ್ ನಿರ್ಮಾಣ ಕಾಮಗಾರಿಯನ್ನು  ಒಂದೇ ದಿನದಲ್ಲಿ ಎತ್ತಂಗಡಿ ಮಾಡಬಹುದು. ಯೋಜನೆಗೆ ಹಿಂಬಾಗಿಲಿನಿಂದ ಅನುಮೋದನೆ ಕೊಟ್ಟ ಮಾಜಿ ಸಚಿವ ಸುನೀಲ್ ಕುಮಾರ್ ಪ್ರತಿಭಟನಾ ನಿರತರನ್ನು ಭೇಟಿಯಾಗಲು ಮುಖವಿಲ್ಲದೆ ತನ್ನ ಬೆಂಬಲಿಗರನ್ನು  ಪ್ರತಿಭಟನಾಕಾರರ ವಿರುದ್ದ ಛೂ ಬಿಟ್ಟಿದ್ದಾರೆ ಎಂದು ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಸರಿತಾ ಶೆಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Related posts

ಡಿಸೆಂಬರ್ 25 ರಿಂದ 30 ಕಾರ್ಲೊತ್ಸವ

Madhyama Bimba

ಛತ್ರಪತಿ ಶಿವಾಜಿ ಜಯಂತೋತ್ಸವ – ಆಶ್ರಮಕ್ಕೆ ಆಹಾರ ಧಾನ್ಯ ವಿತರಣೆ

Madhyama Bimba

ಬಾಬು ರಾಜೇಂದ್ರ ಪ್ರೌಢ ಶಾಲಾ ವಾರ್ಷಿಕೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More