ಬೆಳ್ಮಣ್ಣು: ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಬಾಲಕಿಯರ 12 ವರ್ಷ ವಯೋಮಿತಿಯ ಕಟಾ ವಿಭಾಗದಲ್ಲಿ ಬೋಳ ಪ್ರಾಪ್ತಿ ಎಸ್. ಪೂಜಾರಿ ಭಾಗವಹಿಸಿ ಚಿನ್ನದ ಪದಕ ಮತ್ತು ಪೈಟಿಂಗ್ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.
ಬಾಲಕರ 8 ವರ್ಷ ವಯೋಮಿತಿಯ ಕಟಾ ವಿಭಾಗದಲ್ಲಿ ಬೋಳ ಆಯುಷ್ ಪೂಜಾರಿ ಭಾಗವಹಿಸಿ ಕಂಚಿನ ಪದಕ ಮತ್ತು ಪೈಟಿಂಗ್ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ.
ಇವರೀರ್ವರು ಬೆಳ್ಮಣ್ಣು ಲಕ್ಷ್ಮೀ ಜನಾರ್ಧನ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಗಳು.
ಇವರು ಕಾರ್ಕಳ ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯರಾದ ಬೋಳ ಶ್ರೀಮತಿ ಪುಷ್ಪ ಪೂಜಾರಿ ಮತ್ತು ಬೋಳ ಪಂಚಾಯತ್ ಮಾಜಿ ಅಧ್ಯಕ್ಷರಾದ ಸತೀಶ್ ಪೂಜಾರಿ ಬೋಳ ದಂಪತಿಗಳ ಮಕ್ಕಳು.
ಇವರಿಗೆ ಕರಾಟೆ ಶಿಕ್ಷಕ ಸತೀಶ್ ಪೂಜಾರಿ ಬೆಳ್ಮಣ್ಣು ಇವರು ತರಬೇತಿ ನೀಡಿರುತ್ತಾರೆ.