ರೈತಪರ ಚಿಂತನೆಯೊಂದಿಗೆ ಹೋರಾಟ ಮುಂದುವರಿಯುತ್ತದೆ. ರೈತರಿಗೆ ನ್ಯಾಯ ಸಿಗುವವರೆಗೆ ಈ ಹೋರಾಟ ಮುನ್ನಡೆಸುವುದಾಗಿ ಉದಯ ಶೆಟ್ಟಿ ಮುನಿಯಾಲು ತಿಳಿಸಿದ್ದಾರೆ.
ಇನ್ನಾದಲ್ಲಿ 400 ಕೆ ವಿ ವಿದ್ಯುತ್ ಅಳವಡಿಕೆ ವಿರೋಧಿಸಿ ನಡೆಯುತ್ತಿರುವ ಹೋರಾಟ ಸ್ಥಳದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮುನಿಯಾಲು ಉದಯ ಶೆಟ್ಟಿಯವರು ಖಾಸಗಿ ಜಾಗದಲ್ಲಿ ಅಧಿಕಾರಿಗಳು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ವಿದ್ಯುತ್ ವ್ಯವಸ್ಥೆಯನ್ನು ಬೇರೆ ರಾಜ್ಯಗಳಲ್ಲಿ ಮಾಡುವ ಹಂತದಲ್ಲಿ ಜನರು ಪ್ರಬಲವಾಗಿ ವಿರೋಧ ಮಾಡಿದ್ದಾರೆ.
ಕಳೆದ 1 ವಾರದ ಹಿಂದೆ ಅಧಿಕಾರಿಗಳು ಈ ಸ್ಥಳಕ್ಕೆ ಬಂದು ಜನರ ಮೇಲೆ ತಮ್ಮ ದಬ್ಬಾಳಿಕೆ ಮಾಡಲು ಹೊರಟಾಗ ಜನ ಒಗ್ಗೂಡಿ ಪ್ರತಿಭಟನೆ ಮಾಡಿದ್ದರು. ಅದರ ಬಳಿಕ ಅಹೋ ರಾತ್ರಿ ಧರಣಿಯನ್ನು ನಾವು ಮಾಡಿದ್ದೇವೆ.
ಇದು ಕೇಂದ್ರ ಸರಕಾರದ ಯೋಜನೆ. ಹಾಗಾಗಿ ಕೇಂದ್ರ ಸರಕಾರಕ್ಕೆ ಸಂಬಂಧ ಪಟ್ಟ ಜನ ಪ್ರತಿನಿಧಿಗಳು ಈ ಬಗ್ಗೆ ತಕ್ಷಣ ಸ್ಪಂದನೆ ಮಾಡಬೇಕು.
ಪಡುಬಿದ್ರಿಯಿಂದ ಹಾದು ಹೋಗುವ ಎಲ್ಲಾ ಯೋಜನೆಗಳು ಇನ್ನಾ ಗ್ರಾಮದ ಮೂಲಕವೇ ಹಾದು ಹೋಗುತ್ತದೆ. ಎಲ್ಲಾ ಯೋಜನೆಗಳು ಕೂಡ ಇಲ್ಲಿಂದ ಹಾದು ಹೋದರೇ ಜನ ಇಲ್ಲಿಂದ ಹೋಗೋದು ಎಲ್ಲಿಗೆ. ರೈತರು ತಮ್ಮ ಆತಂಕಗಳನ್ನು ಪರಿಹರಿಸಲು ನಾವು ಎಲ್ಲಿಗೆ ಹೋಗಬೇಕು.
ನಮ್ಮ ಪ್ರತಿಭಟನೆಗೆ ಯಾರು ಕೂಡ ಸಹಕಾರ ನೀಡಿದರು ಕೂಡ ಸ್ವಾಗತ. ಆದರೆ ಪ್ರತಿಭಟನೆ ಮಾಡುವವರನ್ನು ಟೀಕೆ ಮಾಡಿ ಪ್ರತಿಭಟನೆ ಹಾದಿ ತಪ್ಪಿಸಲು ನೋಡೋದು ಪಲಾಯನವಾದ ಎಂದು ಹೇಳಿದರು.
ಹೋರಾಟ ಸಮಿತಿಯ ಅಧ್ಯಕ್ಷರಾದ ಅಮರನಾಥ ಶೆಟ್ಟಿ ಮಾತನಾಡಿ ನಮಗೆ ಪರಿಹಾರವೇ ಬೇಡ. ಈ ಪರಿಹಾರದ ಹಣವನ್ನು ಅಂಡರ್ ಗ್ರೌಂಡ್ ವ್ಯವಸ್ಥೆ ಮಾಡಲು ಕಲ್ಪಿಸಿ ಅದರಲ್ಲಿ ವಿದ್ಯುತ್ ಸಂಪರ್ಕ ಮಾಡಿ . ಅದರ ಬದಲಾಗಿ ಜನರಿಗೆ ತೊಂದರೆ ಮಾಡಬೇಡಿ. ದಬ್ಬಾಳಿಕೆ ಮೂಲಕ ಜನರನ್ನು ದಮನ ಮಾಡಬೇಡಿ ಎಂದರು
ಮುನಿಯಾಲು ಉದಯ ಶೆಟ್ಟಿ, ಹೋರಾಟ ಸಮಿತಿ ಅಧ್ಯಕ್ಷ ಅಮರನಾಥ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಜಯ ಎಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷ ಕುಶ ಮೂಲ್ಯ, ಸುಲೋಚನಾ ಕೋಟ್ಯಾನ್, ಕಸ್ತೂರಿ, ದಿವಾಕರ ಶೆಟ್ಟಿ, ರವೀಂದ್ರ ಶೆಟ್ಟಿ, ಪ್ರವೀಣ್ ಶೆಟ್ಟಿ, ಯೋಗೀಶ್, ಜಯ ಪೂಜಾರಿ, ಸುರೇಶ್ ಮೂಲ್ಯ, ಪ್ರದೀಪ್ ಬೇಲಾಡಿ ಉಪಸ್ಥಿತರಿದ್ದರು.
previous post