ಕಾರ್ಕಳ: ವಿದ್ಯಾರ್ಥಿಗಳೇ ಭ್ರಷ್ಟಾಚಾರ ವಿರೋಧಿ ನಿಲುವಿಗೆ ಬದ್ದರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಡಿ ಎಂದು ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಕಾರ್ಕಳದ ಎಸ್ ವಿಟಿ ಕಾಲೇಜು ಸಭಾಂಗಣದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಾ. ಶೇಖರ ಅಜೆಕಾರು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಹಿರಿಯ ಪತ್ರಕರ್ತ ಬಿ ಎಂ ಬಶೀರ್ ಅವರಿಗೆ ಡಾ.ಶೇಖರ್ ಅಜೆಕಾರ್ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಾಜದ ಕಣ್ಣುಗಳು ಅವರೆ ಸಮಾಜವನ್ನು ಬದಲಾಯಿಸುವವರು, ಮಾನವೀಯತೆಯನ್ನು ರೂಢಿಸಿಕೊಂಡು, ಶಾಂತಿ ಸೌಹಾರ್ದ ಭಾವನೆಯನ್ನು ಕಾಪಾಡಿಕೊಳ್ಳಿ ಮನುಷ್ಯ ಹುಟ್ಟುವಾಗ ಮಾನವ ಆಗದೆ ಬದುಕಿನಲ್ಲಿ ಮಾನವೀಯತೆ ಮೌಲ್ಯವನ್ನು ಬೆಳೆಸಿ ಕೊಂಡು ಸಾರ್ಥಕ ಬದುಕನ್ನು ಬದುಕಿ ಮನುಷ್ಯನಾಗಿ ಸಾಯವುದೇ ಮಾನವೀಯತೆಯ ಪ್ರತೀಕ ಎಂದರು.
ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತ ಬಿ ಎಂ ಬಷಿರ್ ಅವರನ್ನು ಅಭಿನಂದನೆ ಸಲ್ಲಿಸಿದರು.
ಪ್ರಶಸ್ತಿ ಸ್ವೀಕರಿಸಿ ಬಿ ಎಂ ಬಷೀರ್ ಮಾತನಾಡಿ ಶೇಖರ ಅಜೆಕಾರು ಸಾಹಿತ್ಯ ಸಂಘಟಕರಾಗಿದ್ದು ಜನಮೆಚ್ಚುಗೆ ಪಾತ್ರರಾದವರು, ಊರಿಗೆ ಹಾಗೂ ಮುಂಬಯಿ ಜನರಿಗೆ ಸ್ನೇಹ ಸೇತುವಾಗಿದ್ದರು. ಅವರು ಸೂಕ್ಷ್ಮ ಸಂವೇದನೆ ಹೊಂದಿದ್ದರು ಎಂದರು. ಪತ್ರಕರ್ತರು ಸಮಾಜದ ಸೇತುವಾಗಬೇಕೆ ಹೊರತು ಸಮಾಜಕ್ಕೆ ಕಂಟಕವಾಗಬಾರದು. ಇಂದು ಪತ್ರಿಕೆಗಳೂ ಕೂಡ ಅನಗತ್ಯ ವಿಷಯದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುವ ಹಾಗೂ ಅಗತ್ಯ ಸಮಾಜ ಮುಖಿ ಸುದ್ದಿಗಳಿಗೆ ತಾತ್ಸರ ತೋರುತ್ತಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.
ಪ್ರಶಸ್ತಿಯೊಂದಿಗೆ ದೊರೆತ ನಗದನ್ನು ಶೇಖರ್ ಅಜೆಕಾರ್‌ರವರ ಕುಟುಂಬಕ್ಕೆ ನೀಡುವ ಮೂಲಕ ಮಾನವೀಯತೆ ಮೆರದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್ ವಿ ಟಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ ಪಿ ಶೆಣೈ ಮಾತನಾಡಿ ಶೇಖರ ಅಜೆಕಾರು ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮೂಲಕ ಜನರ ಮನಗೆದ್ದವರು. ಸಾಹಿತ್ಯ ಸಂಘಟಕ ಪತ್ರಕರ್ತರಾಗಿದ್ದ ಶೇಖರ ಅಜೆಕಾರು ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿಯನ್ನು ನೀಡುತ್ತಿರುವ ಕಾರ್ಕಳ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ವಾಗಿದೆ ಎಂದು ಪತ್ರಕರ್ತರ ಸಂಘವನ್ನು ಕೊಂಡಾಡಿದರು.
ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು.
ಶಿಲ್ಪಿ ರಾಮಚಂದ್ರ ಆಚಾರ್ಯ, ಸಾಹಿತಿ ಜ್ಯೋತಿ ಗುರುಪ್ರಸಾದ್ ಸಾಂದರ್ಭಿಕವಾಗಿ ಮಾತನಾಡಿದರು.
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಹರೀಶ್ ಆಚಾರ್ಯ, ಖಜಾಂಚಿ ಕೆ ಎಂ ಖಲೀಲ್, ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಕುಮಾರ್ ಮುನಿಯಾಲು ಉಪಸ್ಥಿತರಿದ್ದರು.
ಮೊಹಮ್ಮದ್ ಷರೀಫ್ ಸ್ವಾಗತಿಸಿದರು. ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಆಚಾರ್ಯ ಧನ್ಯವಾದ ವಿತ್ತರು.