ನವಂಬರ್ ತಿಂಗಳಲ್ಲಿ ನಡೆದ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ (ಸಿಎ ಫೈನಲ್) ವಿಷ್ಮ ಹೆಗ್ಡೆ ತೇರ್ಗಡೆಯಾಗಿದ್ದಾರೆ.
ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ. ಪ್ರೌಢ ಶಿಕ್ಷಣವನ್ನು ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಮೂಡುಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಗಳಲ್ಲಿ ಪಡೆದಿರುತ್ತಾರೆ.
ಇವರು 10ನೇ ತರಗತಿಯಲ್ಲಿ ರಾಜ್ಯಕ್ಕೆ 4ನೇ ರ್‍ಯಾಂಕ್, ಪಿಯುಸಿಯಲ್ಲಿ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದಿರುತ್ತಾರೆ. ಸಿಪಿಟಿ ತರಬೇತಿಯನ್ನು ಆಳ್ವಾಸ್ ಸಂಸ್ಥೆಯಲ್ಲಿ ಮತ್ತು ಸಿಎ ಇಂಟರ್ ಮೀಡಿಯೇಟ್‌ನ್ನು ಮಂಗಳೂರಿನ ತ್ರಿಶಾ ವಿದ್ಯಾಸಂಸ್ಥೆಯಲ್ಲಿ ಪೂರ್ಣ ಗೊಳಿಸಿದ್ದಾರೆ.
ಆರ್ಟಿಕಲ್‌ಶಿಪ್‌ನ್ನು ಮಂಗಳೂರಿನ ಪ್ರತಿಷ್ಠಿತ ಶೆಟ್ಟಿ ಆಂಡ್ ಥೋಮಸ್ ಚಾರ್ಟರ್ಡ್ ಅಕೌಂಟೆಂಟ್ಸ್‌ನ ಸಿಎ ಪ್ರವೀಣ್ ಕುಮಾರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಪಡೆದಿರುತ್ತಾರೆ. ಬಿ.ಕಾಂ. ಪದವಿಯನ್ನು ಇಂದಿರಾಗಾಂಧಿ ನ್ಯಾಶನಲ್ ಓಪನ್ ಯುನಿವರ್ಸಿಟಿನಲ್ಲಿ ಮುಗಿಸಿರುತ್ತಾರೆ.
ಇವರು ಕೆನರಾ ಬ್ಯಾಂಕ್‌ನ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹಾಗೂ ವೈಟ್ ಲಿಫ್ಟಿಂಗ್‌ನಲ್ಲಿ ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತ ಕ್ರೀಡಾಪಟು ಪುಷ್ಪರಾಜ್ ಹೆಗ್ಡೆ ಹಾಗು ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ ಗಣಿತ ಪ್ರಾಧ್ಯಾಪಕಿ ಶ್ರೀಮತಿ ಸಹನಾ ಪಿ. ಹೆಗ್ಡೆಯವರ ಪುತ್ರಿಯಾಗಿದ್ದಾರೆ.