ಶಿರ್ತಾಡಿ ಗ್ರಾಮ ಪಂಚಾಯತ್ 2024-25 ನೇ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ ಪಂಚಾಯತ್ ಸಭಾಭವನದಲ್ಲಿ ಇಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಆಗ್ನೇಸ್ ಡಿಸೋಜಾ ವಹಿಸಿದ್ದರು. ವೈದ್ಯಾಧಿಕಾರಿ ಡಾ. ಹಸೀನಾ ವಿಶೇಷ ಚೇತನರ ಇಲಾಖೆಯ ಎಂ.ಆರ್.ಡಬ್ಲ್ಯೂ ಜಯಪ್ರಕಾಶ್ ಕುಲಾಲ್ ಮಾಹಿತಿದಾರರಾಗಿದ್ದರು.
ವಿಶೇಷ ಚೇತನರ ಶಿಬಿರಕ್ಕೆ ಸಹಕಾರ ನೀಡಿದ ಸೌಹಾರ್ದ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ, ಪಂಚಾಯತ್ ಸದಸ್ಯ ಎಸ್. ಪ್ರವೀಣ್ ಕುಮಾನ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ದಾಮೋದರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಸದಸ್ಯರಾದ ಲತಾ ಹೆಗ್ಡೆ, ರಾಜೇಶ್ ಫೆರ್ನಾಂಡೀಸ್, ನಾಗವೇಣಿ, ಸಂಜೀವಿನಿ ಎಂ.ಬಿ.ಕೆ. ಪ್ರತಿಭಾ ವೇದಿಕೆಯಲ್ಲಿದ್ದರು.
ವಿ. ಆರ್.ಡಬ್ಲ್ಯೂ ಸತೀಶ್ ಸ್ವಾಗತಿಸಿದರು. ಗ್ರಂಥಪಾಲಕ ಜಗದೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.