ಕಾರ್ಕಳ: ಜಾಗದ ವಿಚಾರವಾಗಿ ಅಕ್ರಮ ಪ್ರವೇಶ ಮಾಡಿ ಹಲ್ಲೆ ಮಾಡಿದ ಘಟನೆ ಜ. 1ರಂದು ಕೌಡೂರಿನಲ್ಲಿ ನಡೆದಿದೆ.
ಮಲ್ಲಿಕಾ ಹಲ್ಲೆಗೊಳಗಾದ ಮಹಿಳೆ.
ಜಾಗದ ತಕರಾರಿನ ವಿಷಯದಲ್ಲಿ ಆರೋಪಿತರುಗಳಾದ ಗಾಯತ್ರಿ, ಸಾವಿತ್ರಿ, ಲತಾ, ಮದನ್ ಹಾಗೂ ಪ್ರಶಾಂತ್ ಇವರು ಕೂಡಿಕೊಂಡು ಮಲ್ಲಿಕಾರ ಮನೆಗೆ ಏಕಾ ಏಕಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿರುತ್ತಾರೆ. ಈ ಸಂದರ್ಭ ಮಲ್ಲಿಕಾರವರನ್ನು ಬಿಡಿಸಲು ಬಂದ ಭಾನುಮತಿಯವರಿಗೂ ಕೂಡಾ ಎಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.