ಮೂಡುಬಿದಿರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪ್ಪೋ ರಚನೆ ಬಗ್ಗೆ ಮಂಗಳೂರಿನಿಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಿತು.
ಅತೀ ಅವಶ್ಯಕವಾಗಿರುವ ಮೂಡುಬಿದಿರೆ ತಾಲೂಕಿನಲ್ಲಿ ಸರಕಾರಿ ಬಸ್ಸುಗಳಿಗೆ ನಿಲ್ದಾಣ ರಚಿಸಲು ಮತ್ತೆ ಸರ್ವೇ ಕಾರ್ಯ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
‘ಕೆಎಸ್‌ಆರ್‌ಟಿಸಿ ಬಸ್ ಡಿಪ್ಪೋಗೆ ಶಕ್ತಿ’ ಎಂಬ ನಾಮಾಂಕಿತದೊಂದಿಗೆ ಮಾಧ್ಯಮಬಿಂಬ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯು ಈ ಸಭೆಯಲ್ಲಿ ಚರ್ಚೆಗೊಳಪಟ್ಟಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಕೆಎಸ್‌ಆರ್‌ಟಿಸಿ ಜಿಲ್ಲಾ ಅಧಿಕಾರಿ ರಾಜೇಶ್ ಶೆಟ್ಟಿ ಮತ್ತು ಸಮಿತಿಯ ಪದಾಧಿಕಾರಿಗಳು ಮಾಧ್ಯಮಬಿಂಬ ಪತ್ರಿಕೆಯ ವರದಿಯನ್ನು ಅವಲೋಕಿಸಿದರು.
ಮಂಗಳೂರು ಮೂಡುಬಿದಿರೆ ಕಾರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಾಗಲೇ ತಾತ್ಕಾಲಿಕ ಪರವಾನಿಗೆಯೊಂದಿಗೆ 4 ಬಸ್ಸುಗಳು ಸಂಚಾರದಲ್ಲಿದ್ದು ಈ ಪರವಾನಿಗೆಯನ್ನು ಶಾಶ್ವತವಾಗಿ ನೀಡಲು ರಾಜ್ಯ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸಹಿತ ಮೇಲಾಧಿಕಾರಿಗಳಿಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.
ಬಹುಚರ್ಚೆಯಲ್ಲಿರುವ ಮೂಡುಬಿದಿರೆ ನಾರಾವಿ ರಸ್ತೆಯಲ್ಲಿ ಸರಕಾರಿ ಬಸ್ಸು ಓಡಿಸುವ ಬಗ್ಗೆ ಜ. 3ರಂದು ಸರ್ವೇ ಕಾರ್ಯವನ್ನು ಸಾರಿಗೆ ಇಲಾಖೆ ನಡೆಸಿದೆ.
ಗ್ಯಾರಂಟಿ ಯೋಜನೆಗಳ ಮೂಡುಬಿದಿರೆ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.