ಅಜೆಕಾರು: ತುಳು ನಾಡಿನ ಗಂಡು ಕಲೆಗೆ ಕಾನೂನು ಹೆಸರಲ್ಲಿ ತೊಂದರೆ ಮಾಡುವ ಜೊತೆಗೆ ಕೇಸು ದಾಖಲು ಮಾಡಿದ ಘಟನೆ ವರದಿ ಆಗಿದೆ.
ದಿನಾಂಕ 14/01/2025 ರಂದು ಶುಭಕರ, ಪೊಲೀಸ್ ಉಪನಿರೀಕ್ಷಕರು, ಅಜೆಕಾರು ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಜಾರ್ಕಳ ಮುಂಡ್ಲಿ ಗ್ರಾಮದ ಗರಡಿ ಬಳಿ ಯಕ್ಷಗಾನ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಹೋದಾಗ ಅಲ್ಲಿ ಧ್ವನಿವರ್ಧಕ ಬಳಸಿ ಯಕ್ಷಗಾನ ನಡೆಯುತ್ತಿತ್ತು.
ಕಾರ್ಯಕ್ರಮ ನಡೆಸಲು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಿಂದ ಯಾವುದೇ ಪರವಾನಿಗೆಯನ್ನು ಹಾಗೂ ಧ್ವನಿವರ್ಧಕ ಬಳಸಲು ಪೊಲೀಸ್ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆದಿರುವುದಿಲ್ಲವಾಗಿ ಈ ಸಂದರ್ಭದಲ್ಲಿ ತಿಳಿದು ಬಂತು
ಯಕ್ಷಗಾನ ಕಾರ್ಯಕ್ರಮದ ಅಧ್ಯಕ್ಷರಾದ ಸದಾನಂದ ರವರು ಸಂಬಂಧಪಟ್ಟ ಗ್ರಾಮ ಪಂಚಾಯತ್ ನಿಂದ ಯಾವುದೇ ಪರವಾನಿಗೆಯನ್ನು ಹಾಗೂ ಪೊಲೀಸ್ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅಜೆಕಾರು ಮಹಾಲಕ್ಷ್ಮೀ ಸೌಂಡ್ಸ್ ಮಾಲೀಕರಾದ ಅಪ್ಪು ರವರ ಸೌಂಡ್ ಸಿಸ್ಟಂ ಬಳಸಿ ಸಂಘಟಿತ ಅಪರಾಧವೆಸಗಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2025 ಕಲಂ: 112, 292 BNS ಮತ್ತು 37 ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.