ಕಾರ್ಕಳ: ದಿನಾಂಕ 13/01/2025 ರಂದು ಕಾರ್ಕಳ ನಗರದಲ್ಲಿ ಸೈಯದ್ ಸೈಫ್ (22) ನನ್ನು ಅಮಲು ಪದಾರ್ಥ ಸೇವನೆಗಾಗಿ ಪೊಲೀಸರು ಬಂಧಿಸಿದ್ದಾರೆ
ದಸ್ತಗಿರಿ ಮಾಡಿದ ಸಮಯ ಯಾವುದೋ ಅಮಲು ಪದಾರ್ಥ ಸೇವಿಸಿದಂತೆ ವರ್ತನೆ ಮಾಡುತ್ತಿದ್ದು, ಈ ಸಮಯ ಅನುಮಾನಗೊಂಡು ಈತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ಪರೀಕ್ಷಿಸಿ ನಡೆಸಿ ದೃಡಪತ್ರ ನೀಡುವಂತೆ ಕೋರಿ ದಿನಾಂಕ 14/01/2024 ರಂದು ಕಾರ್ಕಳ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಲಾಗಿತ್ತು.
ಇದೀಗ ವೈದ್ಯಕೀಯ ವರದಿ ಬಂದಿದ್ದು, ಅದರಲ್ಲಿ ಸೈಯದ್ ಸೈಫ್ ಮಾದಕ ಪದಾರ್ಥ ಸೇವಿಸಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುತ್ತಾರೆ.
ಈತ ಮಾದಕ ದ್ರವ್ಯ ಸೇವನೆ ನಿರಂತರ ಮಾಡುತ್ತಿದ್ದು ಕಾಲೇಜಿಗೆ ಕೂಡ ಮಾದಕ ಸೇವನೆ ಮಾಡಿ ಹೋಗುತ್ತಿದ್ದ. ಹಲವಾರು ಬಾರಿ ಈತನನ್ನು ಕಾಲೇಜಿನ ಶಿಕ್ಷಕರು ಬುದ್ದಿ ಹೇಳಿ ಸಸ್ಪೆoಡ್ ಮಾಡಿದ್ದರು.
ಆದರೆ ಈತ ಸುಧಾರಣೆ ಕಂಡಿರಲಿಲ್ಲ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2025 ಕಲಂ: 27(b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.