ಕಾರ್ಕಳ

ವೀ ಒನ್ ಅಕ್ವ ಸೆಂಟರ್ ಕಾರ್ಕಳ ಇವರ ನೇತೃತ್ವದಲ್ಲಿ ಉಭಯ ಜಿಲ್ಲಾ ಮಟ್ಟದ ಈಜು ಸ್ಪರ್ಧೆ

ಕಾರ್ಕಳ: ಕಾರ್ಕಳದ ತಾಲೂಕು ಕ್ರೀಡಾಂಗಣದ ಬಳಿ ಇರುವ ಈಜುಕೊಳದಲ್ಲಿ ಅಕ್ವಾ ಸೆಂಟರ್ ಕಾರ್ಕಳ ಇವರ ವತಿಯಿಂದ ನಡೆದ ಅಕ್ವಾ ಅಮಿಗೋಸ್ ಸ್ವಿಮ್ಮಿಂಗ್ ಫೆಸ್ಟ್ -2025 ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ಉದ್ಘಾಟಿಸಿದರು. ಕಾರ್ಕಳದ ಮಣ್ಣಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಮಕ್ಕಳನ್ನು ಕರೆಸಿಕೊಂಡ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಅಕ್ವಾ ಸೆಂಟರ್ ಕಾರ್ಕಳ ದಿಂದ ತರಬೇತು ಪಡೆದು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಂತರಾಷ್ಟ್ರೀಯ ಈಜು ಕ್ರೀಡಾಪಟು ಶ್ರೀಮತಿ ವಿದ್ಯಾ ಪೈಯವರು ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಪೋಷಕರ ಸಹಕಾರ ಇದ್ದಲ್ಲಿ ಉನ್ನತ ಮಟ್ಟ ಏರಲು ಸಾಧ್ಯವೆಂದು ಶುಭನುಡಿದರು.

೩೮ ವರ್ಷಗಳಿಂದ ರಾಮಸಮುದ್ರದಲ್ಲಿ ಉಚಿತವಾಗಿ ಈಜುವನ್ನು ಹೇಳಿಕೊಡುತ್ತಿರುವಂತಹ ವಿಠ್ಠಲ್ ಅವರು ಮತ್ತು ಸರಕಾರಿ ಶಾಲಾ ಶಿಕ್ಷಕಿಯಾಗಿದ್ದುಕೊಂಡು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ಶ್ರೀಮತಿ ವಿಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೀ ಒನ್ ಅಕ್ವಾ ಸೆಂಟರ್ ಡೈರೆಕ್ಟರ್ ಆಗಿರುವ ಶ್ರೀಮತಿ ರೂಪ ಮತ್ತು ನವೀನ್ ಹಾಗೂ ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿ, ಮತ್ತು ಪುರುಷರು, ಮಹಿಳೆಯರು ವಿವಿಧ ವಿನ್ಯಾಸ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ಪ್ರಮಾಣ ಪತ್ರ ಮತ್ತು ಪದಕಗಳನ್ನು ಪಡೆದರು.
ಕು.ಶಾರ್ವರಿ ಪ್ರಾರ್ಥಿಸಿದರು. ಶ್ರೀಮತಿ ರಮಿತಾ ಶೈಲೇಂದ್ರ ನಿರೂಪಿಸಿದರು.

Related posts

ಡಿ.10 ರಂದು ಮಿನಿ ಉದ್ಯೋಗ ಮೇಳ

Madhyama Bimba

ನಡ್ಯೋಡಿ ದೈವಸ್ಥಾನ ಬ್ರಹ್ಮಕಲಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

ಕ್ರೈಸ್ಟ್‌ಕಿಂಗ್: ಕಾನೂನು ಮಾಹಿತಿ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More