ಮೂಡುಬಿದಿರೆ: ಶ್ರೀ ನಡ್ಯೋಡಿ ದೈವಸ್ಥಾನ ಮಾರ್ಪಾಡಿ-ಕಲ್ಲಬೆಟ್ಟು ಫೆಬ್ರವರಿ 25ರಿಂದ ಮಾರ್ಚ್ 3 ರವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ನೇಮೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮೂಡುಬಿದಿರೆಯ ಉದ್ಯಮಿ ಪ್ರಕಾಶ್ ಜೈನ್ ಬಿಡುಗಡೆಗೊಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಪ್ರಸನ್ನ ಹೆಗ್ಡೆ, ಗೌರವ ಅಧಕ್ಷರುಗಳಾದ ಎಂ.ಪುರುಷೋತ್ತಮ ಶೆಟ್ಟಿ, ಚಿನ್ನಯ ಕೋಟ್ಯಾನ್, ಸಮಿತಿ ಉಪಾಧ್ಯಕ್ಷರುಗಳಾದ ಸುರೇಶ್ ಕೋಟ್ಯಾನ್, ವಿಶ್ವನಾಥ ಕೋಟ್ಯಾನ್, ದಿನೇಶ್ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ರಾಧಾಕೃಷ್ಣ ಶೆಟ್ಟಿ, ಸತೀಶ್ ಪೂಜಾರಿ, ಉಮೇಶ್ ಹೆಗ್ಡೆ, ಲೆಕ್ಕಪರಿಶೋಧಕರಾದ ವಿಶ್ವನಾಥ ಸಾಲ್ಯಾನ್, ದೈವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ್ ರೈ, ಕಾರ್ಯದರ್ಶಿ ಯತೀಶ್ ಕೋಟ್ಯಾನ್, ಉಪಾಧ್ಯಕ್ಷರಾದ ಶೈಲೇಶ್ ಶೆಟ್ಟಿ, ಕೋಶಾಧಿಕಾರಿ ಸುರೇಂದ್ರ ಶೆಟ್ಟಿ, ಜತೆ ಕಾರ್ಯದರ್ಶಿ ರವೀಂದ್ರ ಪೂಜಾರಿ, ಸದಸ್ಯರು ಹಾಗೂ ಗುತ್ತು-ಬರ್ಕೆಯವರು ಉಪಸ್ಥಿತರಿದ್ದರು.