ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹೆಬ್ರಿ ಇಲ್ಲಿಗೆ ಉಡುಪಿ ಜಿಲ್ಲಾ ಪ್ರಭಾರ ಲೋಕಾಯುಕ್ತರಾದ ಡಿವೈಎಸ್ಪಿ ಮಂಜುನಾಥ ಶಂಕ್ರಳ್ಳಿ ಅವರು ಜ.೧೫ರಂದು ಅನಿರೀಕ್ಷಿತ ಭೇಟಿ ನೀಡಿ ಶಾಲಾ ವ್ಯವ್ಯಸ್ಥೆ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಕ್ಷರ ದಾಸೋಹಗಳ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಬಿಸಿಯೂಟ ನಿರ್ವಹಣೆಯನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿರುತ್ತಾರೆ ಮತ್ತು ಶಾಲೆಯ ಒಳ ಹೊರಗೆ ಸ್ವಚ್ಚತೆಯನ್ನು ಕಾಪಾಡಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಶಾಲಾ ಅಕ್ಷರ ದಾಸೋಹದ ರಿಜಿಸ್ಟರನ್ನು ಪರಿಶೀಲಿಸಿದರು. ಅಕ್ಷರ ದಾಸೋಹ ತಯಾರಿ ಘಟಕಕ್ಕೆ ಭೇಟಿ ನೀಡಿ ತರಕಾರಿ ಅಕ್ಕಿ, ಮೊಟ್ಟೆ, ಚಿಕ್ಕಿ ಮುಂತಾದ ಆಹಾರ ಸಾಮಗ್ರಿಗಳ ಗುಣಮಟ್ಟ ಪರೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುವುದರೊಂದಿಗೆ ಸಲಹೆ ಸೂಚನೆಗಳನ್ನು ನೀಡಿದರು. ವಿದ್ಯಾರ್ಥಿಗಳನ್ನು ಮಾತನಾಡಿಸಿ ಅಭಿಪ್ರಾಯ ಪಡೆದರು.
ಈ ಸಂದರ್ಭದಲ್ಲಿ ಹೆಬ್ರಿ ತಹಶೀಲ್ದಾರರಾದ ಎಸ್.ಎ ಪ್ರಸಾದ್, ಹೆಬ್ರಿ ತಾಲೂಕು ಪಂಚಾಯತ್ ಇ ಒ ಶಶಿಧರ್ ಕೆ.ಜಿ, ಉಪ ಪ್ರಾಂಶುಪಾಲರಾದ ದಿವಾಕರ ಮರಕಾಲ ಎಸ್, ಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.