ಪಡುಕುಡೂರಿನಿಂದ ಮುದ್ರಾಡಿ ಭಕ್ರೆಮಠ ಭದ್ರಕಾಳಿ ದೇವಸ್ಥಾನಕ್ಕೆ ಪಾದಯಾತ್ರೆ
ಹೆಬ್ರಿ : ಪಡುಕುಡೂರು ಗ್ರಾಮದ ಪಾದಯಾತ್ರಾರ್ಥಿಗಳ ವತಿಯಿಂದ ಮಂಗಳವಾರ ಪಡುಕುಡೂರು ಭದ್ರಕಾಳಿ ದೇವಸ್ಥಾನದಿಂದ ಮುದ್ರಾಡಿ ಭಕ್ರೆಮಠ ಭದ್ರಕಾಳಿ ದೇವಸ್ಥಾನಕ್ಕೆ ೯ನೇ ವರ್ಷದ ಪಾದಯಾತ್ರೆ ನಡೆಯಿತು.
ಗ್ರಾಮಸ್ಥರು, ಸಂಘಸಂಸ್ಥೆಗಳ ಸದಸ್ಯರು, ಪ್ರಮುಖರು, ವಿದ್ಯಾರ್ಥಿಗಳು ಪಾದಯಾತ್ರೆಯಲ್ಲಿ ಪಾಲ್ಗೋಂಡರು. ಪಡುಕುಡೂರು ಭದ್ರಕಾಳಿ ದೇವಸ್ಥಾನದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.