ಬಹಳಷ್ಟು ದಿನಗಳಿಂದ ಕಾರ್ಕಳ ಜನರ ನಿರೀಕ್ಷೆಯಲ್ಲಿದ್ದ ಕಾರ್ಲೊತ್ಸವ 2024 ಆರಂಭಗೊಂಡಿದೆ.
ಇಂದು ಸಾಯಂಕಾಲ ವಿದ್ಯುದ್ದೀಪ ಅಲಂಕಾರವನ್ನು ಉದ್ಘಾಟನೆ ಮಾಡಲಾಯಿತು.
ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಕೋಟ್ಯಾನ್ ಉದ್ಘಾಟನೆ ಮಾಡಿದರು.
ಕಾರ್ಕಳದಲ್ಲಿನ ವಿಶೇಷತೆಗಳನ್ನು ವಿಶ್ವ ಮಾನ್ಯವಾಗಿಸುವ ನಿಟ್ಟಿನಲ್ಲಿ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಕಾರ್ಕಳ ಟೈಗರ್ಸ್ ಹಾಗು ಬಾಯ್ ಜೋನ್ ತಂಡಗಳು ಜಂಟಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿದೆ.
ಡಿಸೆಂಬರ್ 25 ರಿಂದ ವಸ್ತು ಪ್ರದರ್ಶನ ಆರಂಭಗೊಂಡಿದ್ದು, ಡಿಸೆಂಬರ್ 27, 28 ಹಾಗು 29ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಪ್ರಕಾಶ್ ರಾವ್ ಕಾರ್ಯಕ್ರಮ ನಿರೂಪಣೆ ಮಾಡಿದರು.


