ಕಾರ್ಕಳ

ನಾರಾವಿಯಲ್ಲಿ ಸಂತ ಸಮಾಗಮ-ಲೋಕ ಕಲ್ಯಾಣಾರ್ಥ ನಾರಾವಿ ಮಹಾ ಚಂಡಿಕಾ ಯಾಗ – ಕರಾವಳಿಯ ಪರಮ ಪೂಜ್ಯ ನವ ಯತಿವರೇಣ್ಯರ ದಿವ್ಯ ಉಪಸ್ಥಿತಿ

ಡಿಸೆಂಬರ್ 22 ಆದಿತ್ಯವಾರದಂದು ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ವಠಾರದಲ್ಲಿ ನಡೆಯಲಿರುವ ಮಹಾ ಚಂಡಿಕಾ ಯಾಗವು ಕರಾವಳಿಯ ಧಾರ್ಮಿಕ ಕ್ಷೇತ್ರದ ನವರತ್ನ ಸಂತ ಶ್ರೇಷ್ಠ ಯತಿವರೇಣ್ಯರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.

ಆ ನಿಟ್ಟಿನಲ್ಲಿ ನಾರಾವಿಯಲ್ಲಿ ಐದು ಮಾಗಣೆಯ ಹತ್ತು ಸಮಸ್ತರ ನೇತೃತ್ವದಲ್ಲಿ ಆಯೋಜನೆಗೊಂಡಿರುವ ನವ ದುರ್ಗೆಯರ ಮಹಾ ಆರಾಧನೆ ಮಹಾ ಚಂಡಿಕಾ ಯಾಗವು ಕರಾವಳಿಯ ಧಾರ್ಮಿಕ ಗುರು ಪರಂಪರೆಯ ಸಂತಶ್ರೇಷ್ಠ ಯತಿವರೇಣ್ಯರಾಗಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮೂಡುಬಿದಿರೆ ಪರಮ ಪೂಜ್ಯ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, ಆನೆಗುಂದಿ ಮಹಾಸಂಸ್ಥಾನ ಪರಮ ಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಬಲ್ಯೊಟ್ಟು ಮಠಾಧೀಶರು, ಸೋಲೂರು ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಬಂಟ್ವಾಳ ಶ್ರೀಧಾಮ ಮಾಣಿಲ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಕರಿಂಜೆಯ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ ಇವರ ಪರಮ ಶ್ರೇಷ್ಠ ಉಪಸ್ಥಿತಿಯಲ್ಲಿ ಜರುಗಲಿದೆ.

Related posts

ಗಮನ ಸೆಳೆಯಿತು ಗ್ಯಾರಂಟಿ ಅಧ್ಯಕ್ಷರ ದಾನ ಕಾರ್ಯ

Madhyama Bimba

ರಾಷ್ಟೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್- ಬೋಳ ಪ್ರಾಪ್ತಿ ಎಸ್. ಪೂಜಾರಿ ಇವರಿಗೆ 2 ಚಿನ್ನದ ಪದಕ- ಬೋಳ ಆಯುಷ್ ಎಸ್. ಪೂಜಾರಿ ಇವರಿಗೆ 2ಕಂಚಿನ ಪದಕ

Madhyama Bimba

ಗ್ರಾಮ ಪಂಚಾಯತ್ ಉಪಚುನಾವಣೆ: ನಿಷೇಧಾಜ್ಞೆ ಜಾರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More