ಕಾರ್ಕಳ: ರಾಜ್ಯದಲ್ಲಿರುವ ಮತಾಂಧ ಕಾಂಗ್ರೆಸ್ ಸರಕಾರಕ್ಕೆ ಹಿಂದೂ ಸಮಾಜ ತಾಯಿಯಂತೆ ಪೂಜಿಸುವ ಗೋವಿನ, ಕೆಚ್ಚಲು ಕೊಯ್ದು ವಿಕೃತಿ ಮೆರೆದವರು ಮಾನಸಿಕ ಅಸ್ವಸ್ಥರಂತೆ ಕಾಣುತ್ತಾರೆ ಹಾಗೂ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಇಟ್ಟು ಜನರ ಹತ್ಯೆ ಮಾಡ ಹೊರಟವರು ಬ್ರದರ್ಸ್‌ಗಳೆಂದು ಅಪ್ಪಿಕೊಳ್ಳುತ್ತಾರೆ, ಇದು ಅತೀ ದೊಡ್ಡ ವಿಪರ್ಯಾಸ ಎಂದು, ರಾಜ್ಯದ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ಧೋರಣೆಯ ಬಗ್ಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಹರಿಹಾಯ್ದರು.
ಬೆಳ್ಮಣ್ ನ ಶ್ರೀಕೃಷ್ಣ ಸಭಾಭವನದಲ್ಲಿ ನಡೆದ ಬೆಳ್ಮಣ್ ಮಹಾಶಕ್ತಿ ಕೇಂದ್ರದ ಬೂತ್ ಅಧ್ಯಕ್ಷರ ಜನಪ್ರತಿನಿಧಿಗಳ ಹಾಗೂ ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಇಂತಹ ಬೇಜವಾಬ್ದಾರಿತನದ ಅಸಫಲ ಸರಕಾರವನ್ನು ನನ್ನ ರಾಜಕೀಯ ಜೀವನದಲ್ಲೇ ಕಂಡಿಲ್ಲ ಕಾಂಗ್ರೆಸ್ ಆಡಳಿತದಲ್ಲಿ ಕಳ್ಳರಿಗೆ, ದರೋಡೆಕೋರರಿಗೆ ರಹಧಾರಿ ನಿರ್ಮಾಣವಾಗಿದೆ. ಬಡವರು ಮನೆ ಕಟ್ಟಲು ಬೇಕಾದ ಪರವಾನಿಗೆಗಾಗಿ ಸರ್ಕಾರಿ ಕಛೇರಿಗಳನ್ನು ಅಲೆದು ಸುಸ್ತಾದರೂ ಪರವಾನಿಗೆ ಸಿಗುತ್ತಿಲ್ಲ. ಜೊತೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಸುಮಾರು 5000 ಬಡಜನರ ರೇಷನ್ ಕಾರ್ಡ್ ರದ್ದಾಗಲು ಶಿಫಾರಸ್ಸುಗೊಂಡಿದೆ.
ಹಾಲಿನ ದರ ಏರಿಕೆಯಾದರೂ, ಕಳೆದ ಒಂದು ವರ್ಷದಿಂದ ರೈತರಿಗೆ ಸಿಗುತ್ತಿದ್ದ ಹಾಲಿನ ಸಬ್ಸಿಡಿ ಸಿಗುತ್ತಿಲ್ಲ. ಈ ಸರ್ಕಾರದ ಓಲೈಕೆ ನೀತಿಯಿಂದಾಗಿ ರಾಜ್ಯದೆಲ್ಲೆಡೆ ದರೋಡೆ, ಸುಲಿಗೆ, ಅತ್ಯಾಚಾರ ನಡೆಯುತ್ತಿದ್ದು ಎಲ್ಲೆಡೆ ಅರಾಜಕತೆ ಸೃಷ್ಟಿಯಾಗಿದೆ. ಇದರ ವಿರುದ್ಧ ಜನರು ಸ್ವಯಂಪ್ರೇರಿತವಾಗಿ ದಂಗೆ ಏಳಬೇಕಾದಂತಹ ಪರಿಸ್ಥಿತಿ ಬಂದಿದೆ ಎಂದು ಸರಕಾರದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ನವೀನ್ ನಾಯಕ್, ಗೇರು ನಿಗಮದ ಮಾಜಿ ಅಧ್ಯಕ್ಷರಾದ ಮಣಿರಾಜ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಜಯರಾಮ್ ಸಾಲ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮ ಉದಯ್ ಶೆಟ್ಟಿ ಪ್ರಮುಖರಾದ ಸೂರ್ಯಕಾಂತ್ ಶೆಟ್ಟಿ, ಶಂಕರ್ ಕುಂದರ್, ಮುಲ್ಲಡ್ಕರವೀಂದ್ರ ಶೆಟ್ಟಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ದೇವೇಂದ್ರ ಶೆಟ್ಟಿ ಮಂಡಲ ಪ್ರಧಾನಕಾರ್ಯದರ್ಶಿ ಸತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು