ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಆಶ್ರಯದಲ್ಲಿ ಪಿಲಿಕುಳ ಸ್ಕೌಟ್ಸ್ ಮತ್ತು ಗೈಡ್ಸ್ ಸಮುಚ್ಘಯದ ಉದ್ಘಾಟನಾ ಸಮಾರಂಭವು ಜ 5 ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ ಕನ್ನಡ ಜಿಲ್ಲಾ ಮುಖ್ಯ ಆಯುಕ್ತರಾದ ಡಾ. ಎಂ. ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಾಪಕರಾದ ಇಂಗ್ಲೆಂಡ್ ರೋಬಟ್೯ ಸ್ಟೀಫನ್ ಸನ್ ಸ್ಮಿತ್ ಬೇಡನ್ ಪವೆಲ್ ರವರ ಮೊಮ್ಮಗ ಡೇವಿಡ್ ರೋಬಟ್೯ ಬೇಡನ್ ಪವೆಲ್ ರವರು ಉದ್ಘಾಟಿಸಲಿದ್ದಾರೆ.
ಸಂಜೆ 3.50ಕ್ಕೆ ಪಥಸಂಚಲನ, ಸಂಜೆ 4 ಗಂಟೆಗೆ ನೂತನ ಸಭಾಭವನದ ಉದ್ಘಾಟನೆ ಬಳಿಕ 5.30 ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.