
ಮೂಡುಬಿದಿರೆಯ ಪುರಸಭೆ ಮಾರುಕಟ್ಟೆ ಗುತ್ತಿಗೆ ವಿಚಾರದಲ್ಲಿ ಭಿನ್ನ ಸ್ವರ ಮೂಡಿಸುತ್ತಿರುವ ಸ್ವಪಕ್ಷೀಯರಿಗೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮತ್ತು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಶೆಟ್ಟಿ ಮಾಣಿ ನೆಲ್ಲಿಕಾರು ಸಮಾವೇಶದಲ್ಲಿ ಟಾಂಗ್ ನೀಡಿದರು.

ದಿಕ್ಕೂಚಿ ಭಾಷಣದಲ್ಲಿ ಹಿಂದೂಗಳ ನಂಬಿಕೆ ಶ್ರದ್ದೆ ವಿಶ್ವಾಸವನ್ನು ಪ್ರಶ್ನಿಸುವವರಿಗೆ ವಿರೋಧ ವ್ಯಕ್ತಪಡಿಸಿದ ಅವರು ಹಿಂದೂಗಳು ಸ್ವಾವಲಂಬಿ ಜೀವನಕ್ಕೆ ಮುಂದಾದರೆ ನಮ್ಮವರೇ ಭಿನ್ನ ನಿಲುವು ತಳೆಯುತ್ತಾರೆ. ಹಿಂದೂಗಳು ಒಗ್ಗೂಡಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು ಎಂದು ಹೇಳಿದರು. ನರಸಿಂಹ ಮಾಣಿಯವರು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನ ಕೈಯಲ್ಲಿ ಪುರಸಭೆ ಮಾರುಕಟ್ಟೆ ಇರುವುದನ್ನು ಸ್ವಪಕ್ಷೀಯರೇ ಸಹಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಬೆನ್ನಿಗೆ ಚೂರಿ ಹಾಕುವ, ಮತ್ಸರ್ಯ ತೋರುವ ಗುಣ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಹಿಂದೂ ಜಾಗರಣ ವೇದಿಕೆ
ಮೂಡಬಿದ್ರೆ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ಆಶ್ರಯದಲ್ಲಿ
ಶ್ರೇಷ್ಠ ಸಂತ ಸ್ವಾಮೀ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್
ಅವರ ಜನ್ಮ ಜಯಂತಿಯ ಪ್ರಯುಕ್ತ ಶೋಭಾ ಯಾತ್ರೆ
ಮತ್ತು ಯುವ ಸಮಾವೇಶ
ನಡೆಯಿತು.
ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ, ಮೂಡುಬಿದಿರೆ ತಾಲೂಕು ಸಂಯೋಜಕ ಹರೀಶ್ಚಂದ್ರ ಕೆ. ಸಿ. ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ನೆಲ್ಲಿಕಾರು ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ, ಪಂಚಾಯತ್ ಸದಸ್ಯರುಗಳು, ನೆಲ್ಲಿಕಾರ್ ಸಹಕಾರಿ ಸಂಘದ ನಿರ್ದೇಶಕ ಅಶ್ವಥ್ ಪಣಪಿಲ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಸಮಿತ್ ರಾಜ್ ಸ್ವಾಗತಿಸಿ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ಧನ್ಯವಾದವಿತ್ತರು. ಗಣೇಶ ಅಳಿಯೂರು ನಿರೂಪಿಸಿದರು.
ಸಭಾ ಕಾರ್ಯಕ್ರಮ ಮುಂಚಿತವಾಗಿ ನೆಲ್ಲಿಕಾರು ಜಂಕ್ಷನ್‌ನಿಂದ ಗಣಪತಿ ಕಟ್ಟೆಯವರಿಗೆ ಕುಣಿತ ಭಜನೆಯೊಂದಿಗೆ ವೈಭವದ ಮೆರವಣಿಗೆ ನಡೆಯಿತು.