ಮೂಡುಬಿದಿರೆ: ಯೂತ್ ಕಾಂಗ್ರೆಸ್ ಇರುವೈಲು ಇದರ ಕಾಂಗ್ರೆಸ್ ಬೂತ್ ಸಮಿತಿ ರಚನೆ ಹಾಗೂ ಕಾರ್ಯಕರ್ತರ ಸಮ್ಮಿಳನ ಕಾರ್ಯಕ್ರಮ ಇರುವೈಲ್ ನಲ್ಲಿ ನಡೆಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈಯವರು ಸಭೆಯಲ್ಲಿ ಭಾಗವಹಿಸಿ ಸಂಘಟನೆಯ ಮಹತ್ವ ತಿಳಿಸಿದರು.
ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ಕಾಂಗ್ರೆಸ್ ವಕ್ತಾರ ಪದ್ಮಪ್ರಸಾದ್ ಜೈನ್, ಪುರಸಭೆ ಸದಸ್ಯ ಜೊಸ್ಸಿ ಮಿನೇಜೆಸ್, ಪ್ರಮುಖರಾದ ಕುಮಾರ್ ಪೂಜಾರಿ, ಪೂವಪ್ಪ ಸಾಲ್ಯಾನ್, ಜಯರಾಮ್ ಬಂಗೇರ, ಪ್ರವೀಣ್ ಪೂಜಾರಿ, ದಯಾನಂದ್ ಬಂಗೇರ, ಮತ್ತಿತರರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.
ಕಾಂಗ್ರೆಸ್ ಅಭಿಮಾನಿಗಳು ಭಾಗವಹಿಸಿದ್ದರು.