ಕಾರ್ಕಳ ತಾಲೂಕಿನ ಆದಿ ದ್ರಾವಿಡ ಸಮಾಜದ ಒಟ್ಟಿಗೆ ಅಭಿನವ ಭಾರತ ಸಂಘಟನೆಯಿಂದ ಮಾತೃ ವಂದನಾ ಸಮಾವೇಶ ಮತ್ತು ಸಹ ಭೋಜನ ಕಾರ್ಯಕ್ರಮ.
ಸನಾತನ ಹಿಂದು ಧರ್ಮದ ಗಟ್ಟಿ ಅಡಿಪಾಯವಾಗಿರುವ ಆದಿ ದ್ರಾವಿಡ ಸಮಾಜದ ಮೇಲೆ ಪೂರ್ವಜರು ಹೇರಿರುವ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಕಳ ತಾಲೂಕಿನ ಹವಾ ಲ್ದಾರ್ ಬೆಟ್ಟು ನಲ್ಲಿ ಶುಕ್ರವಾರ ಸಂಜೆ 6:00ಗಂಟೆಗೆ ಅಭಿನವ ಭಾರತ ಸೊಸೈಟಿ ಎಂಬ ದೇಶಭಕ್ತ ಸಂಘಟನೆಯಿಂದ ಆದಿ ದ್ರಾವಿಡ ಸಮಾಜದ ಬಾಂಧವರ ಜೊತೆ ಸಹ ಭೋಜನ ಮತ್ತು ಮಾತ್ರವಂದನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀ ಪಾದರು ಭಾಗವಹಿಸಿ ಆದಿ ದ್ರಾವಿಡ ಸಮಾಜದ ಮನೆಗಳಿಗೆ ಭೇಟಿ ನೀಡಿ ಮನೆಯಲ್ಲಿ ದೀಪ ಹಚ್ಚಿ ಹಿಂದೂ ಸಮಾಜದಲ್ಲಿರುವಂತಹ ಮೇಲು-ಕೀಳು ಎಂಬ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಬೇಕು ಇಡೀ ಹಿಂದೂ ಸಮಾಜ ನಾವೆಲ್ಲರೂ ಒಂದೇ ಎಂಬ ಒಗ್ಗಟ್ಟಿನಿಂದ ಬಾಳಬೇಕು ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘ ಚಾಲಕ್ ರಾದ ಸತೀಶ್ ಕಳವಕ್ಕರ್ ಮಾತನಾಡಿ ಅಭಿನವ ಭಾರತ ಸೊಸೈಟಿ ಒಂದು ವಿಶಿಷ್ಟವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮ ಪ್ರತಿ ಗ್ರಾಮದಲ್ಲಿ ಕೂಡ ಆಗಬೇಕು ನಮ್ಮಲ್ಲಿರುವ ಜಾತಿ ತಾರತಮ್ಯ ಹೋಗಲಾಡಿಸಬೇಕು ಹಿಂದೂ ಸಮಾಜ ಉಳಿಯಬೇಕಾದರೆ ಜಾತಿ ಭೇದ ಮೇಲು-ಕೀಲು ಎಂಬ ಭಾವನೆ ಬಿಟ್ಟು ನಾವೆಲ್ಲರೂ ಹಿಂದೂ ಎಂಬ ಭಾವನೆಯಿಂದ ಒಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ನಂತರ ಆದಿ ದ್ರಾವಿಡ ಸಮಾಜದ ಒಟ್ಟಿಗೆ ಯಾವುದೇ ಭೇದಭಾವ ಇಲ್ಲದೆ ಎಲ್ಲರು ಸಹಭೋಜನ ಕಾರ್ಯಕ್ರಮ ಕೂಡ ನಡೆಯಿತು.
ನಂತರ ಆದಿ ದ್ರಾವಿಡ ಸಮಾಜದ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಕೂಡ ನಡೆಯಿತು
ಈ ಕಾರ್ಯಕ್ರಮದಲ್ಲಿ ಅದಮಾರು ಮಠದ ಸ್ವಾಮೀಜಿ ಊರಿನ ಪ್ರಮುಖರಾದ ಸುರೇಶ್ ಹೆಗಡೆ.ಲೋಕೇಶ್ ಬಿ. ಸಾಲಿಯಾನ್ ಬಾಲಕೃಷ್ಣ ಹೆಗಡೆ ಗುರುಸ್ವಾಮಿ ಬಾಲಾಜಿ ಶಿಬಿರ ಶಶಿಧರ್, ಶ್ರೀಕಾಂತ್ ಶೆಟ್ಟಿ ಸೇರಿದಂತೆ, ಅಭಿನವ ಭಾರತದ ಪ್ರಮುಖರು ಮತ್ತು ಕಾರ್ಯಕರ್ತರು ಹಾಜರಿದ್ದರು



