ನಕ್ರೆ ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮಹಾ ರಥೋತ್ಸವ ಫೆ. 4ರಿಂದ ರಥಸಪ್ತಮಿ ಯಂದು ಧ್ವಜಾರೋಹಣಗೊಂಡು ಫೆ. 8ರವರೆಗೆ ನಡೆಯಲಿದೆ.
ಉಡುಪಿ ಪುತ್ತೂರು ಶ್ರೀ ಹಯವದನ ತಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ಶ್ರೀ ಮಹಾ ರಥೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.
ಫೆ.4 ರಂದು ಬೆಳಿಗ್ಗೆ ಗಂಟೆ 10.00ಕ್ಕೆ ಪ್ರಾರ್ಥನೆ, ತೋರಣ ಮುಹೂರ್ತ, ಗಣಯಾಗ, 11.30ಕ್ಕೆ ಧ್ವಜಾರೋಹಣ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6.00 ರಿಂದ ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ, ಕುಕ್ಕುಂದೂರು ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 7.30ಕ್ಕೆ ಉತ್ಸವ ಬಲಿ, ರಾತ್ರಿ ಪೂಜೆ, 9.30ಕ್ಕೆ ಓಂಕಾರ್ ಭಜನಾ ಮಂಡಳಿ, ಕಾಬೆಟ್ಟು ಇವರಿಂದ ಭಜನಾ ಕಾರ್ಯ ಕ್ರಮ, ನಂತರ ಮಹಾರಂಗಪೂಜೆ, ಭೂತ ಬಲಿ ನಡೆಯಲಿದೆ.
ಫೆ. 5ರಂದು ಬೆಳಿಗ್ಗೆ ನವಕ ಕಲಶ, ರುದ್ರಾಭಿಷೇಕ, ನಾಗ ಬನದಲ್ಲಿ ಆಶ್ಲೇಷಾ ಬಲಿ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ6.00ರಿಂದ ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೆರವೇರಲಿದೆ. ರಾತ್ರಿ ಗಂಟೆ 7.30ಕ್ಕೆ ಉತ್ಸವ ಬಲಿ, ರಾತ್ರಿ ಪೂಜೆ ನಡೆಯಲಿದೆ.
ಫೆ. 6ರಂದು ಬೆಳಿಗ್ಗೆ ನವಕ ಕಲಶ, ರುದ್ರಾಭಿಷೇಕ, ಮಧ್ಯಾಹ್ನ ಶ್ರೀ ದೇವರ ರಥಾರೋಹಣ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6.00ರಿಂದ ಶ್ರೀ ಶಾರದಾ ಮಹಿಳಾ ಭಜನಾ ಮಂಡಳಿ ಅನಂತಶಯನ ಇವರಿಂದ ಭಜನೆ, ರಾತ್ರಿ ಗಂಟೆ 7.30ಕ್ಕೆ ಉತ್ಸವ ಬಲಿ, ಶ್ರೀ ಮಹಾ ರಥೋತ್ಸವ, ಪರಿವಾರ ದೈವಗಳ ತಂಬಿಲ, ಭೂತ ಬಲಿ, ಕವಾಟ ಬಂಧನ ನಡೆಯಲಿದೆ.
ಫೆ. 7ರಂದು ಬೆಳಿಗ್ಗೆ ಕವಾಟೋ ದ್ಘಾಟನೆ, ಬೆಳಿಗ್ಗೆ 9.00ರಿಂದ ತುಲಾಭಾರ ಸೇವೆ, ಮಹಾಪೂಜೆ, ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ 6.00ರಿಂದ ಸ್ಥಳೀಯ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 7.30ಕ್ಕೆ ಉತ್ಸವ ಬಲಿ, ದೈವಗಳ ನೇಮ, ಅವಭೃತ ಕಟ್ಟೆಪೂಜೆ, ಧ್ವಜಾವ ರೋಹಣ ಕಾರ್ಯಕ್ರಮ ನಡೆಯಲಿದೆ.
ಫೆ.8ರಂದು ಬೆಳಿಗ್ಗೆ ಪಂಚವಿಂಶತಿ ಕಲಾಭಿಷೇಕ, ಪ್ರಧಾನ ಹೋಮ, ಸಂಪ್ರೋಕ್ಷಣೆ ನಡೆಯಲಿದೆ ಎಂದು ಆಡಳ್ತೆ ಮೊಕ್ತೇಸರರಾದ ನಕ್ರೆ ವರ್ಣಬೆಟ್ಟು ಮುತ್ತಯ್ಯ ನಾಯ್ಕ್ ತಿಳಿಸಿದ್ದಾರೆ.