ಕಾರ್ಕಳ: ಉತ್ತರ ಪ್ರದೇಶದಲ್ಲಿ ನಡೆಯುವ ಕುಂಭಮೇಳದ ಪ್ರಯುಕ್ತ ಪ್ರಯಾಗ್ ರಾಜ್ ಮತ್ತು ಕಾಶಿಗೆ ಹೋಗುವುದಾಗಿ ತಿಳಿಸಿ ಹೋದವರು ಕಾಣೆಯಾದ ಘಟನೆ ಜ. 25ರಂದು ನಡೆದಿದೆ.
ಕಾರ್ಕಳ ಭಾರತ್ ಬೀಡಿ ಕಾಲೋನಿ ವಿ ಸಿ ರೋಡ್ ಕಾಬೆಟ್ಟುವಿನ ನಿವಾಸಿ ಸುದಾಕರ್ (69) ಕಾಣೆಯಾದವರು.
ಇವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಸುದಾಕರ್ ರವರು ಪ್ರಯಾಗ್ ರಾಜ್ ಮತ್ತು ಕಾಶಿಗೆ ಹೋಗುವುದಾಗಿ ತಿಳಿಸಿ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.