ಹೆಬ್ರಿ: ಒಣಗಿದ ಅಡಿಕೆ ಮರವನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಆಕಸ್ಮಿಕವಾಗಿ ಆಯತಪ್ಪಿ ಒಣಗಿದ ಅಡಿಕೆ ಮರವು ತುಂಡಾಗಿ ತಲೆಯ ಮೇಲೆ ಬಿದ್ದು ಗಾಯಗೊಂಡ ಘಟನೆ ವರಂಗ ಗ್ರಾಮದಲ್ಲಿ ಫೆ. 4ರಂದು ನಡೆದಿದೆ.
ರಾಮ (62) ಮೃತಪಟ್ಟ ದುರ್ದೈವಿ. ಫೆ. 4ರಂದು ಇವರು ಮನೆಯ ತೋಟದಲ್ಲಿದ್ದ ಅಡಿಕೆ ಮರವನ್ನು ಕಟ್ಟಿಗೆಗಾಗಿ ತುಂಡರಿಸುವಾಗ ಮರ ಅವರ ತಲೆಯ ಬಿದ್ದಿರುತ್ತದೆ. ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸದ ಕಾರಣ ವೈದ್ಯರು ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು.
ಫೆ. 6ರಂದು ಆಂಬ್ಯುಲೆನ್ಸ್ ನಲ್ಲಿ ಮನೆಗೆ ಕರೆದುಕೊಂಡು ಬರುವಾಗ ಅವರಲ್ಲಿ ಯಾವುದೇ ರೀತಿ ಸ್ಪಂದನೆ ಇರದ ಕಾರಣ ಅನುಮಾನಗೊಂಡು ಅವರನ್ನು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ತೋರಿಸಿದಾಗ ವೈದ್ಯರು ಪರೀಕ್ಷಿಸಿ ರಾಮ ರವರು ದಾರಿ ಮದ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.