ಕುಕ್ಕುಂದೂರು ಗ್ರಾಮದ ಬಸ್ರಿ ನಿವಾಸಿ ಶಮಾನ್ ಶೆಟ್ಟಿ (21) ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಎಂಬಿಎ ಕಲಿಯುತ್ತಿದ್ದ ಶಮಾನ್ ಶೆಟ್ಟಿ ಡಿ. 10ರಂದು ರಾತ್ರಿ ಸುಮಾರು 11.00 ಗಂಟೆಗೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಮಾನ್ ಶೆಟ್ಟಿ ಜಾರ್ಕಳ ಕುಕ್ಕುಂದೂರು ಬಸ್ರಿ ನಿವಾಸಿ ಸಿರಿಯಣ್ಣ ಶೆಟ್ಟಿಯವರ ಪುತ್ರ.
ಮೃತರು ತಂದೆ, ತಾಯಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.