ಕಾರ್ಕಳ

ಜೆಇಇ ಮೈನ್ ಫಲಿತಾಂಶ: ಜ್ಞಾನಸುಧಾದ 8ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ..ಎ ನಡೆಸಿದ ಜೆಇಇ ಮೈನ್ 1ನೇ ಫೇಸ್‌ನ ಫಲಿತಾಂಶದಲ್ಲಿ ಜ್ಞಾನಸುಧಾ ಪಿ.ಯು ಕಾಲೇಜಿನ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.


ವಿದ್ಯಾರ್ಥಿಗಳಾದ ಧನುಷ್ ನಾಯಕ್ 99.7330507 ಪರ್ಸಂಟೈಲ್, ತರುಣ್ ಸುರಾನ 99.7329879 ಪರ್ಸಂಟೈಲ್, ಚಿಂತನ್‌ಜೆ. ಎಂ 99.6686123 ಪರ್ಸಂಟೈಲ್, ಆಕಾಶ್ ಎಚ್.ಪ್ರಭು 99.6148310 ಪರ್ಸಂಟೈಲ್, ಹೃತ್ವಿಕ್ ಶೆಟ್ಟಿ 99.4580440 ಪರ್ಸಂಟೈಲ್, ಕೆ. ಮನೋಜ್ ಕಾಮತ್ 99.4567815 ಪರ್ಸಂಟೈಲ್, ವೇದಾಂತ್ ಶೆಟ್ಟಿ99.2929708 ಪರ್ಸಂಟೈಲ್ ಮತ್ತು ಸತೀಶ್ ಎಸ್. ಕೆ. 99.1444377 ಪರ್ಸಂಟೈಲ್ ಪಡೆದ ಸಾಧಕ ವಿದ್ಯಾರ್ಥಿಗಳಾಗಿದ್ದಾರೆ.

ಜ್ಞಾನಸುಧಾದ ಒಟ್ಟು 9 ವಿದ್ಯಾರ್ಥಿಗಳು 98 ಪಸಂಟೈಲ್‌ಗಿಂತ ಅಧಿಕ, 45 ವಿದ್ಯಾರ್ಥಿಗಳು 95 ಪಸಂಟೈಲ್‌ಗಿಂತ ಅಧಿಕ ಹಾಗೂ 97 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪಸಂಟೈಲ್ ಗಳಿಸಿರುತ್ತಾರೆ. ಒಟ್ಟು 126ವಿದ್ಯಾರ್ಥಿಗಳು ಐ.ಐ.ಟಿ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಗಿಟ್ಟಿಸಿಕೊಂಡಿರುತ್ತಾರೆ.

 

 

 

Related posts

ದೆಹಲಿಯಲ್ಲಿ ನಡೆಯಲಿರುವ ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ ಅಧಿವೇಶನದಲ್ಲಿ ಭಾಗವಹಿಸಲು “ವಿಶೇಷ ಆಹ್ವಾನಿತ ಯೂತ್ ಐಕಾನ್” ಆಗಿ ಇನ್ನಾದ ಮನು ಶೆಟ್ಟಿ ಆಯ್ಕೆ

Madhyama Bimba

ಡಿ. 21: ನೇರ ಸಂದರ್ಶನ

Madhyama Bimba

ಮೀನುಗಾರರಿಗೆ ಎನ್.ಎಫ್.ಡಿ.ಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More