ಕಾರ್ಕಳ: ಫೆ. 11 – JIO World ಸೆಂಟರ್ ಮುಂಬೈನಲ್ಲಿ ಫೆಬ್ರವರಿ 12 ಹಾಗೂ 13ರಂದು ರಾಷ್ಟ್ರೀಯ ಮಟ್ಟದ ಡ್ರೈಫ್ರೂಟ್ಸ್ ಎಕ್ಸ್ಪೋ MEWA INDIA 2025 ಕಾರ್ಯಕ್ರಮ ನಡೆಯುತ್ತಿದ್ದು, ದೇಶದ ಉನ್ನತ ಸ್ಥಾನದಲ್ಲಿರುವ 100 ಒಣಹಣ್ಣುಗಳ ಮಾರಾಟಗಾರರ ಕಾನ್ಫರೆನ್ಸ್ ಕಾರ್ಯಕ್ರಮ ಇದಾಗಿದೆ.
ಈ ಕಾರ್ಯಕ್ರಮದಲ್ಲಿನಮ್ಮ ಕಾರ್ಕಳದ ಪ್ರತಿಷ್ಟಿತ ಸಂಸ್ಥೆಯೆನಿಸಿಕೊಂಡ ಬೋಳಾಸ್ ಆಗ್ರೋ ಪ್ರೈ.ಲಿ. ಸಂಸ್ಥೆಯ ಮುಖ್ಯಸ್ಥರಾದ ರಾಹುಲ್ ಕಾಮತ್ ಮತ್ತು ರಜತ್ ಕಾಮತ್‌ರವರು ಭಾಗವಹಿಸಿ, ರಾಷ್ಟ್ರಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಗೇರು ಉದ್ಯಮದಲ್ಲಿ ಕಾರ್ಕಳವು ಈಗಾಗಲೇ ದೇಶದಾದ್ಯಂತ ಹೆಸರುವಾಸಿಯಾಗಿದ್ದು ಅದರಲ್ಲೂ, ಬೋಳಾಸ್ ಕುಟುಂಬಸ್ಥರು ಗೇರು ಉದ್ಯಮದಲ್ಲಿ ಅನೇಕ ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡು ಒಂದು ಬ್ರ್ಯಾಂಡ್ ಸಂಸ್ಥೆಯನ್ನೇ ಸ್ಥಾಪಿಸಿದ್ದಾರೆ. ಈ ಸಂಸ್ಥೆಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗವಕಾಶವನ್ನು ನೀಡಿ, ಅನ್ನದಾತರೆನಿಸಿಕೊಂಡಿದ್ದು, ಕಾರ್ಕಳದ ಸಮಗ್ರ ಆರ್ಥಿಕತೆಗೆ ತಮ್ಮ ಉದ್ಯಮದ ಮೂಲಕ ಬಲ ತುಂಬಿದ್ದಾರೆ. ಉದ್ಯಮದ ಜೊತೆ ಜೊತೆಗೆ ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ.
ಇದೀಗ ದೇಶದ ಪ್ರಮುಖ ಡ್ರೈಫ್ರೂಟ್ಸ್ ಉತ್ಪಾದಕರ ಸಮ್ಮೇಳನದಲ್ಲಿ, ನಮ್ಮ ಕಾರ್ಕಳದ ಬೋಳಾಸ್ ಸಂಸ್ಥೆಯ ಮುಖ್ಯಸ್ಥರು ಪ್ರತಿನಿಧಿಸಿ, ಮುಖ್ಯ ಭಾಷಣ ಮಾಡಲಿರುವುದು, ನಮ್ಮ ಕಾರ್ಕಳ ಸೇರಿದಂತೆ ಕರ್ನಾಟಕಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಪ್ರತಿಷ್ಟಿತ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಭಾಗವಹಿಸಲಿರುವ ಇಬ್ಬರಿಗೂ ಕಾರ್ಕಳ ಶಾಸಕರು, ಮಾಜಿ ಸಚಿವರಾದ ವಿ ಸುನಿಲ್ ಕುಮಾರ್ ಅಭಿನಂದನೆ ಸಲ್ಲಿಸಿದರು.