ನೂರಾಳ್‌ಬೆಟ್ಟುವಿನ ಕನ್ಯಾಲು ಶ್ರೀ ಮುಜಿಲ್ನಾಯ ದೈವಸ್ಥಾನದ ಜೀರ್ಣೋದ್ಧಾರ ವಿಜ್ಞಾಪನಾ ಪತ್ರವನ್ನು ಶಾಸಕ ವಿ. ಸುನಿಲ್ ಕುಮಾರ್ ಫೆ. 14ರಂದು ದೈವಸ್ಥಾನದ ವಠಾರದಲ್ಲಿ ಬಿಡುಗಡೆಗೊಳಿಸಿದರು.
ದಶಕಗಳಿಂದ ನೆನೆಗುದಿಗೆ ಬಿದ್ದರುವ ಶ್ರೀ ಮುಜಿಲ್ನಾಯ ದೈವಸ್ಥಾನ ಹಾಗೂ ಪರಿವಾರ ಗುಡಿಗಳ ಪುನರ್ ನಿರ್ಮಾಣ ನಮ್ಮ ಜೀವಿತಾವಧಿಯಲ್ಲಿ ನೆರವೇರುತ್ತಿರುವುದು ಹೆಮ್ಮೆಯ ವಿಷಯ. ಪಶ್ಚಿಮ ಘಟ್ಟದ ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಳ್ಳುತ್ತಿರುವ ದೈವಸ್ಥಾನಕ್ಕೆ ತನ್ನ ಶಾಸಕ ನಿಧಿಯಿಂದ, ವೈಯಕ್ತಿಕ ನೆಲೆಯಲ್ಲಿ ಹಾಗೂ ದಾನಿಗಳಿಂದ ಆರ್ಥಿಕ ನೆರವು ಒದಗಿಸಿಕೊಡುವುದಾಗಿ ಸುನಿಲ್ ಕುಮಾರ್ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಾನಿ ವಸಂತ್ ಭಟ್‌ರವರು ಮಾತನಾಡಿ ಪಶ್ಚಿಮ ಘಟ್ಟದ ಪ್ರಕೃತಿಯ ಮಡಿಲಲ್ಲಿ ದೈವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿರುವುದು ಸನಾತನ ಹಿಂದೂ ಧರ್ಮದ ಉಳಿವಿಗೆ ಪೂರಕವಾದ ಕೈಂಕರ್ಯವಾಗಿದ್ದು, ಸರ್ವರೂ ಸಹಕರಿಸಬೇಕೆಂದರು.
ಅಧ್ಯಕ್ಷತೆಯನ್ನು ಡೀಕಯ್ಯ ಗೌಡ ಕನ್ಯಾಲು ವಹಿಸಿದ್ದರು.
ವೇದಿಕೆಯಲ್ಲಿ ಅಶೋಕ್ ಕುಮಾರ್ ಜೈನ್, ಈದು ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಪೂಜಾರಿ, ಜಯವರ್ಮ ಜೈನ್ ಮಾಪಾಲು, ಸುರೇಶ್ ಶೆಟ್ಟಿ ಹೊಸ್ಮಾರು, ವಿಜಯ್ ಕುಮಾರ್ ಜೈನ್ ಕಂಗಿನಮನೆ, ಪುರುಷೋತ್ತಮ ಹೆಚ್., ಸಮುದಾಯದ ಹಿರಿಯರಾದ ಅಣ್ಣಿ ಗೌಡ, ಅರ್ಚಕರಾದ ವಸಂತ ಭಟ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕರಾದ ಕರುಣಾಕರ ಪ್ರಾರ್ಥಿಸಿದರು. ಶ್ರೀಧರ ಗೌಡ ಈದು ಸ್ವಾಗತಿಸಿ, ರೆಂಜಾಳ ನೋಣಯ್ಯ ಗೌಡ ಪ್ರಸ್ತಾಪಿಸಿ, ಗಂಗಾಧರ ಗೌಡ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.