ಕಾಮಗಾರಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರು ತನ್ನ ಅವಧಿಯಲ್ಲಿ ಶೃಂಗೇರಿ ಕ್ಷೇತ್ರದ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲ್ಲೂಕು ಮತ್ತು ಮಲೆನಾಡಿನ ಜನತೆಯ ಹಲವಾರು ವರ್ಷದ ಬೇಡಿಕೆ ಈಡೇರಿಸಲು ಕಟಿ ಬದ್ಧರಾಗಿ ಮಂಜೂರು ಮಾಡಿಸಿರುವ ಏSಖಖಿಅ ಡಿಪೋ ಕಾಮಗಾರಿ ಭರದಿಂದ ನಡೆಯುತ್ತಿದೆ.ಶೃಂಗೇರಿ ಸಮೀಪ ತ್ಯಾವಣದಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳ ಅತ್ಯಂತ ರಮಣೀಯವಾಗಿದೆ.ಸಹಕಾರಿ ಸಾರಿಗೆ ಬಸ್ ಕಂಪನಿಮುಚ್ಚಿದ ನಂತರ ಮಲೆನಾಡಿನ ಗ್ರಾಮಾಂತರ ಪ್ರದೇಶಗಳಿಂದ ಬಸ್ ಸಂಚಾರ ವಿರಳವಾಗಿ ಗ್ರಾಮೀಣ ಸಂಪರ್ಕ ದುಸ್ತರವಾಗಿದೆ.ದಿನ ನಿತ್ಯವೂ ಗ್ರಾಮೀಣ ಭಾಗದಿಂದ ಓಡಾಡುವ ಕಾರ್ಮಿಕರು, ಶಾಲಾ,ಕಾಲೇಜು ವಿದ್ಯಾರ್ಥಿಗಳ ಪಾಡು ಹೇಳ ತೀರದು.ಬಸ್ ಸಂಪರ್ಕ ಇಲ್ಲದೆ ಕೆಲವು ಮಕ್ಕಳು ವಿದ್ಯಾಭ್ಯಾಸ ನಿಲ್ಲಿಸಿದ್ದಾರೆ.
ಮಳೆಗಾಲದ ಮೊದಲು ಅಥವಾ ಆಗಸ್ಟ್ ತಿಂಗಳಲ್ಲಿ ಕಾಮಗಾರಿ ಮುಗಿದು ಮಲೆನಾಡಿನ ಜನತೆಯ ಸೇವೆಗೆ ಕರ್ನಾಟಕ ರಾಜ್ಯ ರಸ್ತೆ ನಿಗಮ ಶೃಂಗೇರಿ ಡಿಪೋ ತನ್ನ ಮುಕ್ತವಾಗಲಿದೆ ಎಂಬ ವಿಶ್ವಾಸ ಶಾಸಕ ಟಿ.ಡಿ.ರಾಜೇಗೌಡರು ವ್ಯಕ್ತಪಡಿಸಿದ್ದಾರೆ. ಡಿಪೋ ಪ್ರಾರಂಭಿಸಿದ ಒಂದು ವರ್ಷದಲ್ಲಿ ಕರ್ನಾಟಕದ ಉತ್ತರ ಕರ್ನಾಟಕ, ಧರ್ಮಸ್ಥಳ ಕರಾವಳಿ ಕರ್ನಾಟಕ, ಕೇರಳ, ತಮಿಳುನಾಡು,ತಿರುಪತಿ ಸೇರಿದಂತೆ ಆಂಧ್ರಪ್ರದೇಶದ, ತೆಲಂಗಾಣ ಪ್ರದೇಶಗಳಿಗೆ ನೇರ ಬಸ್ ಸೇವೆ ಪ್ರಾರಂಭಬಾಗಬಹುದು. ದೇಶದ ಪ್ರಸಿದ್ಧ ಯಾತ್ರಾ ಸ್ಥಳ ಶೃಂಗೇರಿ ಶಾರದಾ ಮಾತೆಯ ದೇವಸ್ಥಾನಕ್ಕೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಂದ ನೇರ ಸಂಪರ್ಕ ಸಾಧ್ಯವಾಗಲಿದೆ.ಮಲೆನಾಡಿನಲ್ಲಿಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ದೊರೆಯಲಿದೆ.ಟೂರಿಸಂ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ.ಡಿಪೋದಲ್ಲಿನೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೇರ ಉದ್ಯೋಗ ಲಭ್ಯವಾಗಲಿದೆ ಎಂಬುದು ಗಮನಾರ್ಹ. ಶೃಂಗೇರಿ ಕ್ಷೇತ್ರದ ಇತಿಹಾಸದಲ್ಲಿಇಷ್ಟೊಂದು ಸಂಖ್ಯೆಯ ಸರ್ಕಾರಿ ಉದ್ಯೋಗ ಸೃಷ್ಟಿಯ ಯೋಜನೆ ಇರಲಿಲ್ಲ.ಗುತ್ತಿಗೆದಾರರು ಕೂಡ ಕಾಮಗಾರಿ ಆದಷ್ಟು ಬೇಗ ಮುಗಿಸಬೇಕು ಎಂದು ಕಾಮಗಾರಿಯನ್ನು ಅತ್ಯಂತ ತ್ವರಿತ ಗತಿಯಲ್ಲಿ ನಡೆಸುತ್ತಿದ್ದಾರೆ.
ಮಲೆನಾಡಿನ ಜನತೆಯ ಹಲವು ದಶಕಗಳ ಕನಸು ಕೆಲವೇ ತಿಂಗಳುಗಳಲ್ಲಿ ಸಾಕಾರವಾಗಿ ಪ್ರಯಾಣಿಕರಿಗೆ, ಪ್ರವಾಸಿಗರಿಗೆ,ವಿದ್ಯಾರ್ಥಿಗಳಿಗೆ ಸುಗಮ ಸಂಚಾರಕ್ಕೆ ಅನುಕೂಲ ಅಗಲಿ ಎಂದು ಮಲೆನಾಡಿನ ನಾಗರೀಕರ ಆಶಯ ಆದಷ್ಟು ಬೇಗ ಈಡೇರಲಿ.