ಹೆಬ್ರಿ: ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸಧೃಢರಾಗಲು ಕ್ರೀಡೆಗಳು ಅತಿ ಅವಶ್ಯಕ. ಪ್ರತಿಯೊಬ್ಬರೂ ಒತ್ತಡದ ಜೀವನವನ್ನು ಸಾಗಿಸುವ ಈ ಕಾಲಘಟ್ಟದಲ್ಲಿ ಒಂದಷ್ಟು ಸಮಯವನ್ನು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಮನಶಾಂತಿಯನ್ನು ಪಡೆಯಬೇಕು. ಬಲ್ಲಾಡಿಯ ಯುವಕರು ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವ ಮೂಲಕ ನಮ್ಮ ತಾಲೂಕಿನ ಉತ್ತಮ ಕ್ರೀಡಾಪಟುವಾಗಿದ್ದ ಸುಶಾಂತ್ ಅವರನ್ನು ನೆನಪಿಸಿ ಗೌರವ ಸಲ್ಲಿಸುವ ಮೂಲಕ ಉತ್ತಮ ಕಾರ್ಯವನ್ನು ಮಾಡಿದ್ದೀರಿ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಮುದ್ರಾಡಿ ಗ್ರಾಮದ ವಿದ್ಯಾನಗರ ಫ್ರೆಂಡ್ಸ್ ಬಲ್ಲಾಡಿ ಆಶ್ರಯದಲ್ಲಿ ತುಂಡುಗುಡ್ಡೆ ಶಾಲಾ ಮೈದಾನದಲ್ಲಿ ನಡೆದ 40 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಮುದ್ರಾಡಿ ಗ್ರಾಮ ಪಂಚಾಯತ್ ಹಿರಿಯ ಸದಸ್ಯ ಗಣಪತಿ ಎಂ. ಮತ್ತು ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಮಾತನಾಡಿ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.)ಅಧ್ಯಕ್ಷರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮುದ್ರಾಡಿಯ ಗುರುರಕ್ಷಾ ಸೌಹಾರ್ದ ಸಹಕಾರಿ ಸೊಸೈಟಿ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ ಆಗಮಿಸಿ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಶೆಟ್ಟಿ ಉಪ್ಪಳ, ಶ್ಯಾಮ ಶೆಟ್ಟಿ ಬಲ್ಲಾಡಿ, ಪ್ರಕಾಶ್ ರಾವ್ ಮುದ್ರಾಡಿ, ಸರೋಜಿನಿ ಶೆಟ್ಟಿ ಗುಡ್ಡೆಮನೆ, ಕ್ರೀಡಾಪಟು ರಾಜೇಶ್ ಸೇರಿಗಾರ್ ಬಲ್ಲಾಡಿ ಉಪಸ್ಥಿತರಿದ್ದರು.
ಸೂರಜ್ ಶೆಟ್ಟಿ ಸ್ವಾಗತಿಸಿದರು. ಗಗನ್ ಸೂರಿಮಣ್ಣು ಕಾರ್ಯಕ್ರಮ ನಿರೂಪಿಸಿ, ಸುದೀಪ್ ಶೆಟ್ಟಿ ವಂದಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುದ್ರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಂಜುನಾಥ್ ಹೆಗ್ಡೆ, ಉದ್ಯಮಿ ಹರೀಶ್ ಶೆಟ್ಟಿ ಪಡುಕುಡೂರು, ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಉದ್ಯಮಿ ಶರತ್ ಶೆಟ್ಟಿ ಬಲ್ಲಾಡಿ, ಉದ್ಯಮಿ ಸನ್ಮಿತ್ ಶೆಟ್ಟಿ, ಶರಣ್ಯ ಶೆಟ್ಟಿ, ಸುರೇಶ್ ಸೂರಿಮಣ್ಣು, ಕ್ರೀಡಾಪಟು ಪ್ರವೀಣ್ ಶೆಟ್ಟಿ, ಸೂರಜ್ ಶೆಟ್ಟಿ ಬಲ್ಲಾಡಿ, ಸಂದೀಪ್ ಶೆಟ್ಟಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿದರು.
ಕ್ರೀಡಾಕೂಟಕ್ಕೆ ಸಹಕಾರ ನೀಡಿದ ಉದ್ಯಮಿ ಸನ್ಮಿತ್ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು. ಹೆಬ್ರಿ ಬೀಡು ಫ್ರೆಂಡ್ಸ್ ಸುಶಾಂತ್ ಟ್ರೋಫಿ -2025ವಿನ್ನರ್ ಆಗಿ ಹಾಗೂ ಅಂಡಾರು ಫ್ರೆಂಡ್ಸ್ ರನ್ನರ್ ಆಗಿ ಬಹುಮಾನ ಪಡೆದುಕೊಂಡರು. ಕ್ರಿಕೆಟ್ ಪಂದ್ಯಾಟಕ್ಕೆ ಸಹಕಾರ ನೀಡಿದ ಎಲ್ಲರನ್ನೂ ಗೌರವಿಸಲಾಯಿತು. ಮುದ್ರಾಡಿ ಪ್ರಶಾಂತ್ ಪೈ ಕಾರ್ಯಕ್ರಮ ನಿರೂಪಿಸಿ, ಪ್ರಶಾಂತ್ ಪೂಜಾರಿ ಬಲ್ಲಾಡಿ ವಂದಿಸಿದರು.