ಕಾರ್ಕಳ

ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೋಳ ಪ್ರಾಪ್ತಿ ಎಸ್. ಪೂಜಾರಿಗೆ ಗ್ರ್ಯಾಂಡ್ ಚಾಂಪಿಯನ್ ಶಿಪ್ ಪ್ರಶಸ್ತಿ

ಕಾರ್ಕಳ : ಹುಬ್ಬಳ್ಳಿಯ ವಾಸವಿ ಮಹಲ್‌ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಬಾಲಕಿಯರ 11 ವರ್ಷ ವಯೋಮಿತಿಯ ಫೈಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ಬೆಳ್ಳಿಯ ಪದಕ ಹಾಗೂ ಬಾಲಕಿಯರ ವಿಭಾಗದ ಪ್ರತಿಷ್ಠಿತ ಗ್ರ್ಯಾಂಡ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಬೋಳ ಪ್ರಾಪ್ತಿ ಎಸ್. ಪೂಜಾರಿ ಪಡೆದಿದ್ದಾರೆ.


ಇವರು ಕಾರ್ಕಳ ತಾಲೂಕು ಪಂಚಾಯತ್ ನಿಕಟ ಪೂರ್ವ ಸದಸ್ಯೆ ಬೋಳ ಪುಷ್ಪ ಪೂಜಾರಿ ಮತ್ತು ಬೋಳ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಬೋಳ ದಂಪತಿಗಳ ಪುತ್ರಿ. ಶಿಕ್ಷಕ ಸತೀಶ್ ಪೂಜಾರಿ ಬೆಳ್ಮಣ್‌ರವರಿಂದ ತರಬೇತಿ ಪಡೆದಿದ್ದಾರೆ. ಇವರು ಬೆಳ್ಮಣ್ ಲಕ್ಷ್ಮೀ ಜನಾರ್ದನ ಇಂಟರ್ ನ್ಯಾಶನಲ್ ಸ್ಕೂಲ್ ನ ವಿದ್ಯಾರ್ಥಿನಿಯಾಗಿದ್ದಾರೆ.

Related posts

ಆಟೋರಿಕ್ಷಾ-ಬೈಕ್ ಅಪಘಾತ: ಗಾಯ

Madhyama Bimba

ಕಾರ್ಕಳ ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾದ ವಾರ್ಷಿಕ ಮಹಾಸಭೆ

Madhyama Bimba

ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಕ್ರಿಯೇಟಿವ್ ಪ್ರತಿಭಾ ಪರ್ವ ಕಾರ್ಯಕ್ರಮ: ನೀಟ್ ಸಾಧಕರಿಗೆ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More