ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಗುಂಪೊಂದು ಯುವಕನ ಮೇಲೆ ಹಲ್ಲೆ. ಜೀವ ಬೆದರಿಕೆ ಹಾಕಿದ ಘಟನೆ ಫೇ.18ರಂದು ನಡೆದಿದೆ.
ಉಡುಪಿ ಬೊಮ್ಮರಬೆಟ್ಟು ಗ್ರಾಮದ ಸಾತ್ವಿಕ್ (20) ಎಂಬವರು ಮಧ್ಯಾಹ್ನ 1.30ಕ್ಕೆ ನಿಟ್ಟೆ ಕಾಲೇಜು ಹಿಂಭಾಗದಲ್ಲಿರುವ ವಿಜಯಂತ್ ಎಂಬುವವರ ಅಂಗಡಿಯ ಸಮೀಪ ನಡೆದುಕೊಂಡು ಹೋಗುತ್ತಿರುವಾಗ ಆಪಾದಿತರಾದ ಯತೀಶ್, ಹರ್ಷ, ವಿನೋದ್ ಹಾಗೂ ಇತರ ಇಬ್ಬರ ಜೊತೆ ಕಾರಿನಲ್ಲಿ ಬಂದು ಯತೀಶ್ ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿ. ವಿನೋದ್ ಕೈಯಲ್ಲಿದ್ದ ಚೂರಿ ಹಿಡಿದುಕೊ0ಡು ಕೊಲ್ಲುವುದಾಗಿ ಬೆದರಿಕೆ ಹಾಕಿ ಹಾಗೂ ಉಳಿದವರು ಕೂಡ ಕೈ ಗಳಿಂದ ಹಲ್ಲೆ ನಡೆಸಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.