
ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ವ್ಯಾಪ್ತಿಯಲ್ಲಿದ್ದ ಶಿರ್ತಾಡಿ, ಪಡುಕೋಣಾಜೆ ಮೂಡುಕೊಣಾಜೆ ಗ್ರಾಮಗಳಲ್ಲಿ ರೈತ ಸದಸ್ಯರಿಗೆ
ಕೃಷಿ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೂ ಕೃಷಿ ಸಾಲ ಸಹಿತ ಚಿನ್ನಾಭರಣ ಮತ್ತಿತರ ಸಾಲ ನೀಡದಿರುವ ಬಗ್ಗೆ ಸಂಘದ ಮಾಜಿ ಅಧ್ಯಕ್ಷ ಎಸ್. ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಇಂದು ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಶಿರ್ತಾಡಿ ಶಾಖೆಯಲ್ಲಿ ಪ್ರತಿಭಟನೆ ನಡೆಯಿತು.
ಸಂಘದ ಕಚೇರಿ ಮುಂಭಾಗ ಮಾಜಿ ಸದಸ್ಯರಾದ ಚಿಂತನ್ ಲೋಬೋ, ಶಶಿಕುಮಾರ್ ಶೆಟ್ಟಿ, ಸದಸ್ಯರಾದ ವಾರಿಜ, ಶೋಭಾ, ಜೇಸನ್ ಪಿರೇರಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಚೇರಿಗೆ ಭೇಟಿ ನೀಡಿದ ಆಡಳಿತಾಧಿಕಾರಿ ನಾಗೇಂದ್ರ ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡುವ ಬಗ್ಗೆ ತಿಳಿಸಿದರು. ಸಹಕಾರಿ ಡಿ. ಆರ್. ರೊಂದಿಗೆ ಕೂಡ ದೂರವಾಣಿ ಮೂಲಕ ಸಂಪರ್ಕಿಸಿದಾಗ ಗುರುವಾರ ಸೂಕ್ತ ಉತ್ತರ ನೀಡುವ ಭರವಸೆಯಿತ್ತರು.