ಮೂಡುಬಿದಿರೆ ಚೌಟರ ಅರಮನೆಯ 18ಮಾಗಣೆಗಳ ಶ್ರೀ ಕ್ಷೇತ್ರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಮೆರವಣಿಗೆಯು ಮೂಡುಬಿದಿರೆ ಚೌಟರ ಅರಮನೆ ಆವರಣ ಮುಂಭಾಗದಿಂದ ಅಪರಾಹ್ನ ಪ್ರಾರಂಭಗೊಂಡಿತು.
ಎಡಪದವು ಸುಬ್ರಹ್ಮಣ್ಯ ತಂತ್ರಿಯವರು ಹಾಗು ದೇವಸ್ಥಾನ ವ್ಯಾಪ್ತಿಯ ಬಸದಿಗಳ ಇಂದ್ರರು ಹಾಗೂ ದೇವಸ್ಥಾನಗಳ ಅರ್ಚಕರ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಚೌಟರ ಅರಮನೆಯ ಅಬ್ಬಕ್ಕ ಪ್ರತಿಮೆಗೆ ಅನಿತಾ ಸುರೇಂದ್ರ ಕುಮಾರ್ ಮಾರ್ಲಾಪಣೆಗೈದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಕುಮಾರ್, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಮೋಹನ್ ಆಳ್ವ, ಅರಮನೆ ರಾಜೇಂದ್ರ, ಮೊಕ್ತೇಸರರಾದ ಕುಲದೀಪ ಎಂ., ಜಯಶ್ರೀ ಅಮರನಾಥ ಶೆಟ್ಟಿ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಬಿಜೆಪಿ ಮುಖಂಡ ಸುದರ್ಶನ ಎಂ., ಪಟ್ನಶೆಟ್ಟಿ ಸುದೇಶ್ ಕುಮಾರ್, ಉದ್ಯಮಿ ನಾರಾಯಣ ಪಿ.ಎಂ., ಶ್ರೀಪತಿ ಭಟ್, ಹರ್ಷವರ್ಧನ್ ಪಡಿವಾಳ್, ಮೇಘನಾಥ್ ಶೆಟ್ಟಿ, ಹಾಗೂ ಊರ ಪ್ರಮುಖರು ವಿವಿಧ ಗ್ರಾಮಗಳ ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆ ಸ್ವರಾಜ್ ಮೈದಾನ್, ರಿಂಗ್ ರೋಡ್, ಒಂಟಿಕಟ್ಟೆ ಮೂಲಕ ದೇವಸ್ಥಾನಕ್ಕೆ ಸಾಗಿ ಬಂತು.