ಹೆಬ್ರಿ: ಹೆಬ್ರಿ ಗ್ರಾಮದ ಬಡಾಗುಡ್ಡೆ ಹೋಗುವ ದಾರಿ ಬಳಿ ಸಾರ್ವಜನಿಕ ಸ್ಥಳದಲ್ಲಿ 8 ಮಂದಿ ಹೊಡೆದಾಡಿಕೊಂಡ ಘಟನೆ ಮಾ. 13ರಂದು ವರದಿಯಾಗಿದೆ.
ಹೆಬ್ರಿ ಪೊಲೀಸ್ ಠಾಣಾ ಪೊಲೀಸ್ ಉಪನೀರೀಕ್ಷಕರಾದ ಮಹೇಶ್ ಟಿ ಎಮ್ ರೌಂಡ್ಸ್‌ನಲ್ಲಿರುವಾಗ ಸಂಜೆ ಹೆಬ್ರಿ ಗ್ರಾಮದ ಬಡಾಗುಡ್ಡೆ ಹೋಗುವ ದಾರಿ ಬಳಿ 7-8 ಜನರು ಸೇರಿಕೊಂಡು ಜೋರಾಗಿ ಬೊಬ್ಬೆ ಹಾಕುತ್ತಾ ಬೈದಾಡಿಕೊಂಡು ಒಬ್ಬರಿಗೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದ ಹನುಮಂತ, ಸುರೇಶ್, ರೇಖಾ, ರಮೇಶ, ಮಂಜುನಾಥ, ದುರ್ಗೇಶ್, ಹನುಮಂತ, ವಿಶ್ವನಾಥ ಇವರ ವಿರುದ್ದ ಹೆಬ್ರಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.