ಕಾರ್ಕಳ: ಗ್ಯಾರಂಟಿ ಯೋಜನೆ ಬಗ್ಗೆ ಅಪಹಾಸ್ಯ ಮಾಡುವ ಬಿಜೆಪಿ ಯವರಿಗೆ ಬದ್ಧತೆ ಇದ್ದರೆ ಗ್ಯಾರಂಟಿ ತ್ಯಜಿಸಲಿ ಎಂದು ರಾಜ್ಯದ ಉಪ ಮುಖ್ಯ ಮಂತ್ರಿ ಡಿ ಕೆ ಶಿವ ಕುಮಾರ್ ತಿಳಿಸಿದ್ದಾರೆ.
ಕಾರ್ಕಳದಲ್ಲಿ ನಡೆದ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮಾತನಾಡಿ ಮನ ಮೋಹನ್ ಸಿಂಗ್, ಇಂದಿರಾ ಗಾಂಧಿ, ರಾಜೀವ ಗಾಂಧಿಯವರು ಶಿಕ್ಷಣ ಹಾಗು ಬಡತನವನ್ನು ನಿರ್ಮೂಲನೆ ಮಾಡಲು ವಿವಿಧ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡಿದ್ದಾರೆ ಎಂದರು.
ಕಾರ್ಕಳda ಪುಣ್ಯ ಭೂಮಿಯಲ್ಲಿ ಪರಶುರಾಮ ಮೂರ್ತಿ ನಕಲಿ ವಿಚಾರ ಗಳನ್ನು ಮುಂದಿಟ್ಟು ಕೊಂಡು ಶಾಸಕ ಸುನಿಲ್ ಕುಮಾರ್ ಪರಶುರಾಮನಿಗೆ ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಅವರು ಪರಶುರಾಮರಿಗೆ ಮಾಡಿದ ಅಪಚಾರವನ್ನು ಮುಂದಿನ ಚುನಾವಣೆವರೆಗೂ ಜನ ನೆನಪಿನಲ್ಲಿಟ್ಟುಕೊಳ್ಳಬೇಕು. ಕಾರ್ಕಳದಲ್ಲಿ ಹಾಳು ಮಾಡಿದ ಪ್ರವಾಸೋದ್ಯಮವನ್ನು ಎಲ್ಲರೂ ನೋಡುವಂತೆ ಆಗಬೇಕು ಎಂದರು.
ಸುನಿಲ್ ಕುಮಾರ್ ರವರ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್ ರವರು ಮೊದಲು ಸುನಿಲ್ ಕುಮಾರ್ ಅವರ ಬಿಜೆಪಿ ಯಲ್ಲಿನ ಗೊಂದಲ ಗಳನ್ನು ಸರಿಪಡಿಸಲಿ ಹಾಗೂ ತಮ್ಮ ಪ್ರದಾನ ಕಾರ್ಯ ದರ್ಶಿ ಹುದ್ದೆ ಗೆ ಯಾಕೆ ರಾಜೀನಾಮೆ ನೀಡಿದ್ದಾರೆ ಎಂದು ಜನತೆ ಮುಂದೆ ಬಹಿರಂಗ ಪಡಿಸಲಿ ಎಂದರು
ಶಾಸಕರಾಗಿ 50 ವರ್ಷ ಪೂರ್ಣ ಗೊಳಿಸಿದ ಹಿನ್ನಲೆ ಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ಎಂ ವೀರಪ್ಪ ಮೊಯ್ಲಿ ಯವರು ಡಿ ಕೆ ಶಿವಕುಮಾರ್ ಎಂ ಎಲ್ ಎ ಆಗಬೇಕೆಂದು ಮೊದಲು ಟಿಕೆಟ್ ಕೊಡಿಸಿದವರು ನಾನೇ.
ಅದರಂತೆ ಮೊದಲ ಬಾರಿಗೆ ಡಾ ಎಂ ರಾಜೇಂದ್ರರವರನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಾಡಿಸಿದವರು ನಾನೇ. ಇವರಿಬ್ಬರ ನನ್ನ ಆಯ್ಕೆ ಸಮರ್ಪಕವಾಗಿದೆ ಮತ್ತು ಡಿ ಕೆ ಶಿವಕುಮಾರ್ ಮುಖ್ಯ ಮಂತ್ರಿ ಯಾಗುವುದನ್ನು ಯಾರಿಂದಲೂ ತಪ್ಪಿಸುವುದು ಸಾಧ್ಯವಿಲ್ಲ.ಎಂದು ಹೇಳಿದರು ಮೋದಿ ಯವರು ಹೊರಗೆ ಶೃಂಗಾರ ಒಳಗೆ ಗೋಳಿ ಸೊಪ್ಪು ಎಂದು ವಂಗ್ಯ ವಾಗಿ ಮಾತನಾಡಿದ ಅವರು ದೇಶ ದಲ್ಲಿ ಬಡತನ ಹಾಗೂ ಹಸಿವಿನ ಪ್ರಮಾಣ ಅಧಿಕವಿದ್ದು ಹಲವಾರು ಅಂಕಿ ಅಂಶಗಳೇ ಹೇಳುತ್ತಿದೆ.
ಬಡವರು ಬಡವರಾಗಿಯೇ ಶ್ರೀಮಂತರು ಶ್ರೀಮಂತರಾಗಿಯೇ ಇದ್ದಾರೆ. ಸಂಪತ್ತು ಶ್ರೀಮಂತರಿಕೆ ಕೇಂದ್ರೀ ಕೃತವಾಗಿದೆ ಎಂದು ಹೇಳಿದರು
ಮುನಿಯಲು ಉದಯ ಶೆಟ್ಟಿಯವರು ಮಾತನಾಡಿ ಮಲೆನಾಡು -ಕರಾವಳಿ ಸಂಪರ್ಕಿಸುವ ಘಾಟಿಗಳಾದ ಆಗುಂಬೆ ಶಿರಾಡಿ ಮತ್ತು ಚಾರ್ಮಾಡಿ ರಸ್ತೆಗಳನ್ನು ಅಭಿವೃದ್ದಿ ಮಾಡ ಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್. ರಾಜೇಂದ್ರ ಕುಮಾರ್, ವಿಧಾನ ಪರಿಷತ್ ಸದಸ್ಯಮಂಜುನಾಥ್ ಭಂಡಾರಿ.ಜಯ ಪ್ರಕಾಶ್ ಹೆಗ್ಡೆ. ಕೆಪಿ ಸಿಸಿ ಸದಸ್ಯ ಪದ್ಮ ರಾಜ್. ಮಾಜಿ ಸಚಿವರಾದ ಅಭಯ್ ಚಂದ್ರ ಜೈನ್. ರಮನಾಥ್ ರೈ. ಐವನ್ ಡಿಸೋಜಾ. ಮಂಜುನಾಥ್ ಪೂಜಾರಿ ಮುದ್ರಾಡಿ . ಮಿಥುನ್ ರೈ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ಮತ್ತಿತರ ಉಪಸ್ಥಿತರಿದ್ದರು.