ಕಾರ್ಕಳ ವಿಧಾನಸಭಾ ಕ್ಷೇತ್ರದ ಎರಡು ಬ್ಲಾಕ್ ಗಳ ಎಲ್ಲಾ ನೂತನ ಪಧಾದಿಕಾರಿಗಳ ಪದಗ್ರಹಣ, ಡಾ. ವೀರಪ್ಪ ಮೊಯಿಲಿಯವರ ಸನ್ಮಾನ, ವೃದ್ದಾಶ್ರಮಕ್ಕೆ ಸಹಾಯಧನ ವಿತರಣೆ, ಪಕ್ಷ ಸೇರ್ಪಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡ ಕಾಂಗ್ರೇಸ್ ಕುಟುಂಬೋತ್ಸವ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆದಿದೆ, ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ರಾಜ್ಯಾದ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ಇತರ ಪಕ್ಷ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಕಾರ್ಯಕರ್ತರಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ.
ಕಾರ್ಯಕ್ರಮದ ಬಗ್ಗೆ ಮೊದಲಿನಿಂದಲೂ ಕುಹಕದ ಮಾತುಗಳನ್ನು ಆಡುತ್ತಿದ್ದ ಕಾರ್ಕಳದ ಬಿಜೆಪಿ ಕಾರ್ಯಕ್ರಮದ ಯಶಸ್ವಿಯ ನಂತರ ಮಾನಸಿಕ ಸ್ಥಿಮಿತ ಕಳೆದು ಕೊಂಡಂತೆ ವರ್ತಿಸುತ್ತಿರುವುದು ದುರಾದೃಷ್ಟವೆ ಸರಿ, ಸತ್ಯವನ್ನು ಒಪ್ಪಿಕೊಳ್ಳಲು ಒಳ್ಳೆಯ ಹೃದಯ ಬೇಕು ಹೊಟ್ಟೆ ಉರಿಯ ಬೆಂಕಿ ಒಂದು ದಿನ ನಿಮ್ಮನ್ನೇ ಸುಡುತದೆ ಎಚ್ಚರವಿರಲಿ ಎಂದು ಶುಭದರಾವ್ ಎಚ್ಚರಿಸಿದ್ದಾರೆ.
ಕ್ಷೇತ್ರಾದ್ಯಕ್ಷರು ಕಾರ್ಯಕ್ರಮದ ದಿನವೇ ಹೇಳಿಕೆಗಳನ್ನು ನೀಡಿ ಅಪಹಾಸ್ಯ ಮಾಡುವ ಪ್ರಯತ್ನ ಮಾಡಿದರು, ಅದು ನಿಮ್ಮ ಹಳೇ ಚಾಳಿ ಎಂದು ಸುಮ್ಮನಿದ್ದೆವು ಆದರೆ ಇನ್ನೊಬ್ಬರು ಅವರನ್ನು ಮೀರಿಸಿ ದಿವಂಗತ ಗೋಪಾಲ್ ಭಂಡಾರಿಯವರನ್ನು ಅವಮಾನಿಸಲಾಗಿದೆ ಎಂದು ಸುಳ್ಳು ಹೇಳಿಕೆಯನ್ನು ನೀಡಿ ಕ್ಷೇತ್ರದ ಜನತೆಗೆ ಮಂಕುಬೂದಿ ಎರಚುವ ಪ್ರಯತ್ನ ಮಾಡಿದ್ದಾರೆ ಇದರಿಂದ ನಿಮ್ಮ ಯೋಗ್ಯತೆ ಏನೆಂದು ತಿಳಿಯುತ್ತದೆ ವಿನಹ ಬೇರೇನೂ ಆಗುದಿಲ್ಲ, ನಾವು ಕಾರ್ಯಕ್ರಮದ ವೇದಿಕೆಗೆ ದಿವಂಗತ ಗೋಪಾಲ್ ಭಂಡಾರಿಯವರ ಹೆಸರನ್ನೇ ಇಟ್ಟು ವೇದಿಕೆಯ ಬ್ಯಾನರ್ ನಲ್ಲಿಯೂ ಅವರ ಪೋಟೋವನ್ನು ಹಾಕಿದ್ದೇವೆ ಆದರೂ ಬಿಜೆಪಿ ಅನಾವಶ್ಯಕ ಸುಳ್ಳು ಹೇಳಿಕೆಯನ್ನು ನೀಡುತ್ತಿರುವುದು ದುರಾದೃಷ್ಟ, ಸೈದ್ದಾಂತಿಕ ವೈರುದ್ಯಗಳಿದ್ದರು ಒಳ್ಳೆಯ ಕೆಲಸ ಯಾರು ಮಾಡಿದರೂ ಅದನ್ನು ಒಪ್ಪುವ ಒಳ್ಳೆಯ ಗುಣಬೇಕು ಆದರೆ ಕಾರ್ಕಳ ಬಿಜೆಪಿಗೆ ಅದು ಇಲ್ಲ ಎಂದು ಅವರ ಹೇಳಿಕೆಯಿಂದ ತಿಳಿಯಿತು
ದೇಶಕ್ಕೆ ಆಡಳಿತವನ್ನು ನೀಡುತಿರುವ ಒಂದು ಪಕ್ಷ ಈ ಮಟ್ಟಕ್ಕೆ ಇಳಿಯುತ್ತಿದೆಯಲಾ ಎನ್ನುವುದೆ ಬೇಸರ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ